ಕಡಬ: ಕಡಬ ಪೊಲೀಸ್ ಠಾಣೆಯಲ್ಲಿ ಜನಸ್ನೇಹಿ ಠಾಣಾಧಿಕಾರಿ ಎಂದು ಗುರುತಿಸಿಕೊಂಡಿದ್ದ ಎಸ್.ಐ ರುಕ್ಮನಾಯ್ಕ್ ಬೆಳ್ಳಾರೆ ಠಾಣೆಗೆ ವರ್ಗಾವಣೆಯಾಗಿದ್ದು, ಬೆಳ್ಳಾರೆ ಠಾಣೆ ಎಸ್.ಐ ಆಂಜನೇಯ ರೆಡ್ಡಿ ಕಡಬ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಈ ಕುರಿತು ಪಶ್ಚಿಮ ವಲಯ ಐಜಿಪಿ ಕಛೇರಿ ಆದೇಶ ಹೊರಡಿಸಿದೆ. ಕಳೆದೆರಡು ವರ್ಷಗಳಿಂದ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರುಕ್ಮನಾಯ್ಕ್ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದರು.ಇದರ ಜೊತೆಗೆ ಠಾಣೆಯ ಅಭಿವೃದ್ದಿಗೆ ಶ್ರಮಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಲ್ಲದೆ ನಾಪತ್ತೆ ಪ್ರಕರಣಗಳನ್ನು ತ್ವರಿತವಾಗಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದರು.
ಮಾಧ್ಯಮ ವರದಿಗಳಿಗೆ ತ್ವರಿತವಾಗಿ ಸ್ಪಂದಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಹಲವು ಬಡ ಕುಟುಂಬಗಳನ್ನು ಕೋರ್ಟ್ ಗೆ ಅಲೆದಾಟ ಮಾಡುವುದನ್ನು ತಪ್ಪಿಸಿ ಠಾಣೆಯಲ್ಲೇ ಮಾತುಕತೆ ಮೂಲಕ ಬಗೆ ಹರಿಸಲು ಪ್ರಯತ್ನಿಸಿದ್ದರು. ಕೋವಿಡ್ ಸಂದರ್ಭದಲ್ಲಿ ಜನರು ನಿಯಮ ಮೀರಿ ತಿರುಗಾಡುತ್ತಿದನ್ನು ಗಮನಿಸಿ ಸ್ವತ: ತಾನೇ ಫೀಲ್ಡ್ ಗೆ ಇಳಿದು ಸಂಚಲನ ಮೂಡಿಸಿದ್ದರು.
Kshetra Samachara
30/03/2022 09:35 pm