ಮಂಗಳೂರು: ಹಿಜಾಬ್ ವಿಚಾರದಲ್ಲಿ ರಾಜ್ಯ ಹೈಕೋರ್ಟ್ ತೀರ್ಪು ವಿರೋಧಿಸಿ ಮುಸ್ಲಿಂ ಸಂಘಟನೆಗಳಿಂದ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಮುಸ್ಲಿಂ ಬಾಹುಳ್ಯದ ಪ್ರದೇಶಗಳು ಸಂಪೂರ್ಣ ಸ್ತಬ್ಧಗೊಂಡಿದೆ.
ಬಹುತೇಕ ಮುಸ್ಲಿಂ ವ್ಯಾಪಾರಸ್ಥರೇ ವಹಿವಾಟು ನಡೆಸುವ ಮಂಗಳೂರಿನ ಬಂದರು ಪ್ರದೇಶ ಭಾಗಶಃ ಬಂದ್ ಆಗಿದೆ.
ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಗೂ ದಿನಸಿ ಸಾಮಾಗ್ರಿ ರಫ್ತಾಗುವ ಬಂದರು ಪ್ರದೇಶದಲ್ಲಿ ದಿನಸಿ ಸಾಮಾಗ್ರಿ ಮಾರಾಟ ಅಂಗಡಿ ಸೇರಿದಂತೆ ಹಲವಾರು ಅಂಗಡಿಗಳು ಬಂದ್‌ಆಗಿವೆ. ಈ ಮೂಲಕ ಮುಸ್ಲಿಂ ಸಮುದಾಯದಿಂದ ಬಂದ್ ಗೆ ಸಂಪೂರ್ಣ ಬೆಂಬಲ.
ಉಳಿದಂತೆ ಜಿಲ್ಲೆಯ ಹಲವೆಡೆ ವ್ಯಾಪಾರ ವಹಿವಾಟು ಯಥಾಸ್ಥಿತಿ. ಸಾರಿಗೆ ಸಂಚಾರಕ್ಕೂ ಯಾವುದೇ ತೊಂದರೆಯಿಲ್ಲ. ಮುಸ್ಲಿಮರಿಂದ ಮಾತ್ರ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿ ಬಂದ್ ಗೆ ಬೆಂಬಲ ವ್ಯಕ್ತವಾಗಿದೆ.
Kshetra Samachara
17/03/2022 04:34 pm