ಉಡುಪಿ: ಮಹಿಳೆಯರ ಗಂಭೀರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಾನ ಮನಸ್ಕ ಮಹಿಳೆಯರು ಸೇರಿ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯನ್ನು ಹುಟ್ಟು ಹಾಕಿದ್ದಾರೆ.
ಮಣಿಪಾಲದ ಆಶ್ಲೇಷ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಮಾಲಕಿ ಶ್ರುತಿ ಜಿ.ಶೆಣೈ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವೇದಿಕೆಯ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳೊಂದಿಗೆ ಸಮಾಜ ಮುಖಿ ಅರಿವು ಕಾರ್ಯಕ್ರಮಗಳನ್ನು ನಡೆಸಲಿವೆ.
ಅಧ್ಯಕ್ಷರಾಗಿ ಸುನಿತಾ ಆದಿದ್ರಾವಿಡ ಕಾರ್ಕಳ, ಉಪಾಧ್ಯಕ್ಷರಾಗಿ ಸಾಧನ ಕಿಣಿ ಉಡುಪಿ, ಕಾರ್ಯದರ್ಶಿಯಾಗಿ ಜಯಶ್ರೀ ಭಂಡಾರಿ ಉಡುಪಿ, ಜೊತೆ ಕಾರ್ಯದರ್ಶಿಯಾಗಿ ಪೂರ್ಣಿಮಾ ಶೆಟ್ಟಿ ಉಡುಪಿ, ಕೋಶಾಧಿಕಾರಿಯಾಗಿ ಸುಲೋಚನಾ ಕೊಡವೂರು ಉಡುಪಿ, ಸಂಘಟನಾ ಕಾರ್ಯದರ್ಶಿಗಳಾಗಿ ಬೇಬಿ ಶೆಟ್ಟಿ, ಪದ್ಮಾವತಿ ಅಮೀನ್ ಬಜಗೋಳಿ, ತಿಲೋತ್ತಮ ನಾಯಕ್ ಉಡುಪಿ, ಆಪ್ತ ಸಮಾಲೋಚಕರುಗಳಾಗಿ ಶ್ರುತಿ ಜಿ. ಶೆಣೈ, ಡಾ.ಪ್ರಮೀಳಾ ಜೆ. ವಾಜ್, ರೇಷ್ಮಾ ಸೈಯದ್ ಆಯ್ಕೆಯಾಗಿದ್ದಾರೆ.
Kshetra Samachara
08/03/2022 07:35 pm