ಮಂಗಳೂರು: ನಗರದ ಸಿಟಿ ಬಸ್ಸೊಂದರ ಫುಟ್ ಬೋರ್ಡ್ ನಲ್ಲಿ ಕಾಲೇಜು ವಿದ್ಯಾರ್ಥಿನಿಯರು ಫುಟ್‌ಬೋರ್ಡ್‌ನಲ್ಲಿ ಪ್ರಯಾಣಿಸಿರುವ ವೀಡಿಯೋವೊಂದು ವೈರಲ್ ಆಗಿರುವ ಬೆನ್ನಲ್ಲೇ ಮಂಗಳೂರು ಸಂಚಾರ ಪೊಲೀಸರು ಬಸ್ಗೆ ದಂಡ ವಿಧಿಸಿದ್ದಾರೆ.
ರೂಟ್ ಸಂಖ್ಯೆ 19ರ ನಗರದ ಸ್ಟೇಟ್ ಬ್ಯಾಂಕ್ನಿಂದ ಬೋಂದೆಲ್ ನಡುವೆ ಸಂಚರಿಸುವ ಖಾಸಗಿ ಸಿಟಿ ಬಸ್ನ ಫುಟ್‌ಬೋರ್ಡ್‌ನಲ್ಲಿ ವಿದ್ಯಾರ್ಥಿನಿಯರು ನೇತಾಡಿಕೊಂಡು ಪ್ರಯಾಣಿಸುತ್ತಿದ್ದರು. ಬಸ್ ಹಿಂಭಾಗದಲ್ಲಿ ಸಂಚರಿಸುತ್ತಿದ್ದ ವಾಹನದಲ್ಲಿದ್ದವರು ಇದರ ವೀಡಿಯೋ ಚಿತ್ರೀಕರಿಸಿದ್ದರು. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಕಾಲೇಜು ವಿದ್ಯಾರ್ಥಿನಿಯರು ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಸುತ್ತಿದ್ದರಿಂದ ಖಾಸಗಿ ಬಸ್ನ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ವೈರಲ್ ವೀಡಿಯೋ ಗಮನಿಸಿರುವ ಮಂಗಳೂರು ಸಂಚಾರಿ ಠಾಣೆ ಪೊಲೀಸರು ಬಸ್ಗೆ 500 ರೂ. ದಂಡ ವಿಧಿಸಿದ್ದಾರೆ.
PublicNext
02/02/2022 12:16 pm