ಮಂಗಳೂರು: ರಾಯಚೂರಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಹುದ್ದೆಯಿಂದ ವಜಾಗೊಳಿಸಿ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ನಗರದ ಮಿನಿ ವಿಧಾನ ಸೌಧದ ಎದುರು ದ. ಕ ಜಿಲ್ಲಾ ಕೊರಗ ಸಂಘಟನೆಯ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯಲ್ಲಿ ದ. ಸಂ. ಸ. ರಾಜ್ಯ ಸಂಘಟನಾ ಸಂಚಾಲಕ ಎಂ. ದೇವದಾಸ್, ಜಿಲ್ಲಾ ಸಂಚಾಲಕ ರಘು. ಕೆ. ಎಕ್ಕಾರ್, ಸಂಘಟನಾ ಸಂಚಾಲಕ ನಾಗೇಶ್ ಚಿಲಿಂಬಿ, ತಾಲೂಕು ಸಂಘಟನಾ ಸಂಚಾಲಕ ಸುರೇಶ್ ಬೆಳ್ಳಾಯರ್, ಮುಖಂಡರಾದ ಯು. ಬಿ. ಉಮೇಶ್, ರಾಕೇಶ್ ಕರಂಬಾರ್, ಜಯ ಕಾಟಿಪಳ್ಳ ಮುಂತಾದವರು ಭಾಗವಹಿಸಿ ಬೆಂಬಲಿಸಿದರು.
Kshetra Samachara
31/01/2022 09:46 pm