ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ವೀಕೆಂಡ್ ಕರ್ಫ್ಯೂ; ಭಾನುವಾರ ವಾಹನ ಸಂಚಾರ ವಿರಳ

ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯ ಹಳೆಯಂಗಡಿ, ಕಿನ್ನಿಗೋಳಿ, ಪಕ್ಷಿಕೆರೆ, ಪಡುಪಣಂಬೂರು, ಅತಿಕಾರಿಬೆಟ್ಟು ಪರಿಸರದಲ್ಲಿ ಜಿಲ್ಲಾಡಳಿತದ ಆದೇಶದ ಮೇರೆಗೆ ಭಾನುವಾರದ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ.

ಭಾನುವಾರ ಜನರು ರಜಾ ಮೂಡ್ ನಲ್ಲಿದ್ದು ರಾಷ್ಟ್ರೀಯ ಹೆದ್ದಾರಿ ಸಹಿತ ಒಳ ಪೇಟೆಯಲ್ಲಿ ವಾಹನ ಸಂಚಾರ ವಿರಳವಾಗಿತ್ತು.

ಕಾರ್ನಾಡ್ ನಲ್ಲಿ ಜಿಲ್ಲಾಡಳಿತದ ಸೂಚನೆ ಉಲ್ಲಂಘಿಸಿ ತೆರೆದ ಅಂಗಡಿಯನ್ನು ಪೊಲೀಸರು ದಂಡ ಪ್ರಯೋಗದ ಮೂಲಕ ಮುಚ್ಚಿಸಿದ್ದಾರೆ.

ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಹಾಗೂ ಕಿನ್ನಿಗೋಳಿ-ಕಟೀಲು ಮೂಡಬಿದ್ರೆ ಕಡೆಗೆ ಬೆರಳೆಣಿಕೆಯಷ್ಟು ಬಸ್ಸುಗಳು ಬೆಳಗಿನ ಅವಧಿಯಲ್ಲಿ ಓಡಾಟ ನಡೆಸಿದ್ದರೆ ಮಧ್ಯಾಹ್ನದ ಬಳಿಕ ಪ್ರಯಾಣಿಕರ ಕೊರತೆಯಿಂದ ಹೆಚ್ಚಿನ ಬಸ್ಸುಗಳು ಓಡಾಟ ನಿಲ್ಲಿಸಿದೆ.

ಈ ನಡುವೆ ಜಿಲ್ಲಾಡಳಿತದ ಕೋವಿಡ್ ನಿಯಮದ ವಿರುದ್ಧ ಮುಲ್ಕಿ ಆಟೋ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರ್ಧಂಬರ್ಧ ಅಂಗಡಿ ಓಪನ್ ಮಾಡಿ ಸರಕಾರ ಏನು ಕಾರ್ಯ ಸಾಧಿಸಲು ಹೊರಟಿದೆ?, ಜನರಿಗೆ ಕರ್ಫ್ಯೂ ನಿಂದ ಹೊರಗೆ ಬರಲು ಇಲ್ಲ, ವಾಹನ ಸಂಚಾರ ಯಾವ ಪುರುಷಾರ್ಥಕ್ಕೆ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

09/01/2022 09:50 pm

Cinque Terre

15.07 K

Cinque Terre

0

ಸಂಬಂಧಿತ ಸುದ್ದಿ