ಉಡುಪಿ: ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಗೆ 2ನೇ ದಿನವೂ ಜನರ ಸ್ಪಂದನೆ ಉತ್ತಮವಾಗಿತ್ತು. ಇಂದು ಭಾನುವಾರವೂ ಆಗಿದ್ದರಿಂದ ಜನರು ಮನೆಯಿಂದ ಹೊರಗೆ ಬಂದಿಲ್ಲ.
ಉಡುಪಿ, ಕುಂದಾಪುರ, ಕಾರ್ಕಳ ತಾಲೂಕುಗಳಲ್ಲಿ ಜನಸಂಚಾರ ವಿರಳ ಇತ್ತು. ನಿನ್ನೆ ಬಸ್ ಗಳ ಓಡಾಟ ಇದ್ದರೂ ಪ್ರಯಾಣಿಕರಿರಲಿಲ್ಲ. ಇಂದು ಕೆಲವೇ ಬಸ್ ಗಳು ಇದ್ದವು. ಉಳಿದಂತೆ ನಗರ ಮತ್ತು ಜಿಲ್ಲೆಯ ಗಡಿ ಭಾಗಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ನಿನ್ನೆ ಮತ್ತು ಇಂದು ಕರ್ಫ್ಯೂ ಉಲ್ಲಂಘನೆ ಪ್ರಕರಣ ದಾಖಲಾಗಿಲ್ಲ. ಆದರೆ, ಮಾಸ್ಕ್ ಹಾಕದವರಿಗೆ ದಂಡ ಮುಂದುವರೆದಿದೆ.
Kshetra Samachara
09/01/2022 06:35 pm