ಉಡುಪಿ: ಕೆಲ ದಿನಗಳ ಹಿಂದೆ ಮೃತ ಪಟ್ಟ ರಘು ಪೂಜಾರಿ ಎಂಬವರ ಸಂಬಂಧಿಕರು ಸ್ಪಂದಿಸದ ಕಾರಣ ಹೊಸಬೆಳಕು ಆಶ್ರಮದವರು ವಿಶು ಶೆಟ್ಟಿ ಅವರ ಮುಖಾಂತರ ಅಂತ್ಯ ಕ್ರಿಯೆಯನ್ನು ಬಿಡಿನಗುಡ್ಡೆಯ ರುದ್ರ ಭೂಮಿಯಲ್ಲಿ ನೆರವೇರಿಸಿದ ಘಟನೆ ನಡೆದಿದೆ.
ಮೃತ ರಘು ಪೂಜಾರಿ ಕಳೆದ ಒಂದೂವರೆ ವರ್ಷಗಳ ಹಿಂದೆ ಅನಾರೋಗ್ಯದಿಂದ ಅಸಹಾಯಕರಾಗಿ ಬೀದಿ ಪಾಲಾಗಿದ್ದರು.ವಿಶು ಶೆಟ್ಟಿಯವರು ರಕ್ಷಿಸಿ ಮಣಿಪಾಲದ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದರು. ಮೃತ ಪಟ್ಟ ನಂತರ ಸಂಬಂಧಿಕರ ಬರುವಿಕೆಗಾಗಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಶವವನ್ನು ರಕ್ಷಿಸಿ ಇಡಲಾಗಿತ್ತು. ಸಂಬಂಧಿಕರು ಬಾರದ ಕಾರಣ ಉಡುಪಿ ಠಾಣಾ ತನಿಖಾ ಸಹಯಕರಾದ ವಿಶ್ವನಾಥ ಶೆಟ್ಟಿಯವರು ಕಾನೂನು ಪ್ರಕ್ರಿಯೆ ನಡೆಸಿ ಅಂತ್ಯಸಂಸ್ಕಾರಕ್ಕೆ ಸಹಕರಿಸಿದರು.
Kshetra Samachara
28/12/2021 11:43 am