ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹೆದರಿ ಮನೆ ಬಿಟ್ಟು ಬಂದಿದ್ದ 10 ವರ್ಷದ ಬಾಲಕನ ರಕ್ಷಣೆ

ಉಡುಪಿ: ಉಡುಪಿ ನಗರದ ಬಸ್ ನಿಲ್ದಾಣದಲ್ಲಿ ಅಪರಿಚಿತ ಬಾಲಕನೊಬ್ಬ ಅಳುತ್ತಾ ಇದ್ದ ಮಾಹಿತಿ ಪಡೆದುಕೊಂಡ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ಕುಕ್ಕಿಕಟ್ಟೆಯ ಚೈಲ್ಡ್ ಹೆಲ್ಪ್ ಲೈನ್ ಗೆ ದಾಖಲಿಸಿದ್ದಾರೆ.

ಈ ಬಾಲಕ ಹೆದರಿ ಮನೆ ಬಿಟ್ಟು ಬಂದಿರುವುದಾಗಿ ತಿಳಿಸಿದ್ದಾನೆ. ತುಂಬಾ ಅಳುತ್ತಿದ್ದ ಬಾಲಕ ತನ್ನ ಹೆಸರು ಅಲ್ತಾಫ್ (10 ವರ್ಷ) ಎಂದು ಹೇಳಿಕೊಂಡಿದ್ದು, ಮಂಗಳೂರಿನಿಂದ ಬಸ್ ಮೂಲಕ ಬಂದಿರುವುದಾಗಿ ತಿಳಿಸಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಸಣ್ಣ ಮಕ್ಕಳು ಏಕಾಂಗಿಯಾಗಿ ಬಸ್ ನಲ್ಲಿ ಸಂಚರಿಸುವಾಗ ನಿರ್ವಾಹಕರು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡುವುದು ಉತ್ತಮ ಎಂದು ವಿಶು ಶೆಟ್ಟಿ ಹೇಳಿದ್ದಾರೆ. ಸಂಬಂಧಪಟ್ಟವರು ಚೈಲ್ಡ್ ಹೆಲ್ಪ್ ಲೈನ್ ಸಂಪರ್ಕಿಸಬಹುದು.

Edited By : PublicNext Desk
Kshetra Samachara

Kshetra Samachara

30/10/2021 10:16 am

Cinque Terre

16.13 K

Cinque Terre

1

ಸಂಬಂಧಿತ ಸುದ್ದಿ