ಮಂಗಳೂರು: ಬಜರಂಗದಳದ ಕಾರ್ಯಕರ್ತರು ಮುಸಲ್ಮಾನ ಹೆಣ್ಣು ಮಕ್ಕಳನ್ನು ಲವ್ ಮಾಡಬೇಕೆಂದು ಹೊರಟರೆ, ಕೇವಲ ಎರಡೇ ದಿನಗಳಲ್ಲಿ ಮುಸಲ್ಮಾನರ ಮನೆಯಲ್ಲಿ ಒಂದೂ ಬುರ್ಖಾ ಕಾಣೋಲ್ಲ. ಮುಸಲ್ಮಾನ ಹೆಣ್ಣು ಮಕ್ಕಳ ಹಣೆಗೆ ಕುಂಕುಮ ಇಟ್ಟು ಕರೆದುಕೊಂಡು ಬರುತ್ತೇವೆ ಎಂದು ಚೈತ್ರಾ ಕುಂದಾಪುರ ಸಾರ್ವಜನಿಕವಾಗಿ ಭಾಷಣದ ತುಣುಕೊಂದು ಭಾರೀ ವೈರಲ್ ಆಗುತ್ತಿದೆ.
ಬಹಳಷ್ಟು ಪ್ರಕರಣಗಳಲ್ಲಿ ಹಿಂದೂ ಯುವತಿಯರನ್ನು ಮುಸಲ್ಮಾನರು ಮತಾಂತರ ಮಾಡುವ ಘಟನೆಗಳು ನಡೆಯುತ್ತಲೇ ಇವೆ. ಈಗಾಗಲೇ ಇಂತಹ ಸುಮಾರಷ್ಟು ಪ್ರಕರಣಗಳನ್ನು ನಾವು ಕಂಡಿದ್ದು, ನಾವೀಗ ಕೊಡುವುದು ಕೊನೆಯ ಎಚ್ಚರಿಕೆ ಎಂದು ಹೇಳಿರುವ ಚೈತ್ರಾ ಕುಂದಾಪುರ, ನಮ್ಮ ತಾಳ್ಮೆಯ ಮಿತಿ ಮೀರಿದರೆ ನಮಗೂ ಮತಾಂತರ ಮಾಡೋಕ್ಕೆ ಗೊತ್ತು. ಮರ್ಯಾದೆಯಿಂದ ಲವ್ ಜಿಹಾದ್ ಮಾಡೋದು ಬಿಟ್ಟರೆ ನೀವು ಬದುಕಿಕೊಳ್ಳುವಿರಿ. ಇಲ್ಲದಿದ್ದಲ್ಲಿ 70% ಇರುವ ಹಿಂದೂಗಳು 23% ಇರುವ ಮುಸಲ್ಮಾನರ ಮನೆಯಲ್ಲಿ ಬುರ್ಖಾ ಇಲ್ಲದಂತೆ ಮಾಡುತ್ತಾರೆ ಎಂದಿದ್ದಾರೆ. ಸುರತ್ಕಲ್ ನಲ್ಲಿ ನಡೆದ ಹಿಂದೂ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿರುವ ವೀಡಿಯೋ ತುಣುಕೊಂದು ಭಾರೀ ವೈರಲ್ ಆಗುತ್ತಿದ್ದು, ಇದರ ಬಗ್ಗೆ ಪರ - ವಿರೋಧ ಮಾತುಗಳು ಕೇಳಿ ಬರುತ್ತಿದೆ.
ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮಾತನಾಡಿ, ಇಂತಹ ಪ್ರಚೋದಕಾರಿ ಭಾಷಣ, ಮಾತುಗಳ ವೀಡಿಯೋಗಳ ಬಗ್ಗೆ ಪೊಲೀಸ್ ಇಲಾಖೆಯ ಸೈಬರ್ ಸೆಲ್ ಗಮನಿಸುತ್ತಿರುತ್ತದೆ. ಇಂತಹ ಪ್ರಚೋದನಾಕಾರಿ ವಿಚಾರಗಳು ಇದ್ದಲ್ಲಿ ಕಾನೂನಿನ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
Kshetra Samachara
05/10/2021 10:17 pm