ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಾಲಸನ್ಯಾಸಕ್ಕೆ ಸಂಬಂಧಿಸಿದ ಅರ್ಜಿ ಹೈಕೋರ್ಟ್ ನಿಂದ ವಜಾ: ಮಠದಲ್ಲಿ ಸಂಭ್ರಮಾಚರಣೆ

ಉಡುಪಿ: ಉಡುಪಿಯ ಶೀರೂರು ಮಠದ ನೂತನ ಪೀಠಾಧಿಪತಿ ನೇಮಕ ವಿಚಾರವಾಗಿ ಪೀಠಾಧಿಕಾರಿ ಆಯ್ಕೆ ವಿರುದ್ಧ ಸಲ್ಲಿಸಲಾಗಿದ್ದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.ಈ ಹಿನ್ನೆಲೆಯಲ್ಲಿ ಇವತ್ತು ಉಡುಪಿಯ ರಥಬೀದಿಯಲ್ಲಿರುವ ಶೀರೂರು ಮಠದ ಮುಂದೆ ಸಂಭ್ರಮಾಚರಣೆ ನಡೆಯಿತು.ಪಟಾಕಿ ಸಿಡಿಸಿ, ಸಿಹಿ ಹಂಚಿ ಕೋರ್ಟ್ ಆದೇಶಕ್ಕೆ ಭಕ್ತರಿಂದ ಸ್ವಾಗತ ದೊರೆಯಿತು.

ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳು ದೈವಾಧೀನರಾದ ಬಳಿಕ ಶೀರೂರು ಮಠಕ್ಕೆ ಬಾಲಸನ್ಯಾಸಿಯೊಬ್ಬನನ್ನು ನೇಮಿಸಲಾಗಿತ್ತು. ಬಾಲಸನ್ಯಾಸಕ್ಕೆ ಆಕ್ಷೇಪ ವ್ಯಕ್ತಪಡಿಸಿ ವೃಂದಾವನಸ್ಥರಾಗಿದ್ದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯ ಸಹೋದರ ಲಾತವ್ಯ ಆಚಾರ್ಯ ಕೋರ್ಟ್ ಮೆಟ್ಟಿಲು ಹತ್ತಿದ್ದರು.ಆದರೆ ಕೋರ್ಟ್ ,ಲಾತವ್ಯ ಆಚಾರ್ಯ ಅವರ ಅರ್ಜಿಯನ್ನು ವಜಾ ಮಾಡಿದೆ.ಶೀರೂರು ಮಠಕ್ಕೆ ಇತ್ತೀಚೆಗೆ ಸೋದೆ ಸ್ವಾಮೀಜಿ ಶಿಷ್ಯ ಸ್ವೀಕಾರ ಮಾಡಿದ್ದರು.

Edited By : PublicNext Desk
Kshetra Samachara

Kshetra Samachara

29/09/2021 01:21 pm

Cinque Terre

7.15 K

Cinque Terre

1

ಸಂಬಂಧಿತ ಸುದ್ದಿ