ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಟ್ರಾಫಿಕ್ ಪೊಲೀಸರಿಂದ ಭರ್ಜರಿ ಆಪರೇಷನ್- ಒಂದೇ ದಿನದಲ್ಲಿ 3.45 ಲಕ್ಷ ರೂ. ದಂಡ ವಸೂಲಿ

ಮುಲ್ಕಿ: ಮಂಗಳೂರು ಕಮಿಷನರ್ ಆದೇಶದಂತೆ ಮುಲ್ಕಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಚಾಲಕ ಹಾಗೂ ಸವಾರರ ಮೇಲೆ ಟ್ರಾಫಿಕ್‌ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.

ಎಸಿಪಿ ನಟರಾಜ್ ಹಾಗೂ ಠಾಣಾ ಇನ್ಸ್‌ಪೆಕ್ಟರ್ ಶರೀಫ್ ನೇತೃತ್ವದ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಮಂಗಳವಾರ ದೋಷಪೂರಿತ ನಂಬರ್ ಪ್ಲೇಟ್ ವಾಹನಗಳಿಗೆ ದಂಡ ವಿಧಿಸಲಾಯಿತು. ಈ ಸಂದರ್ಭ ಪೊಲೀಸರು ಹಾಗೂ ವಾಹನ ಸವಾರರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಬುಧವಾರ ಹೆಲ್ಮೆಟ್ ಹಾಕದೆ ನಿಯಮಗಳನ್ನು ಗಾಳಿಗೆ ತೋರುವವರ ವಿರುದ್ಧ ಅಭಿಯಾನ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ನಡುವೆ ಉಡುಪಿ ಜಿಲ್ಲೆಯಿಂದ ಕೆಲವು ಬೈಕ್ ಹಾಗೂ ಇತರ ವಾಹನ ಸವಾರರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವಾಗ ನಿಯಮಗಳನ್ನು ಗಾಳಿಗೆ ತೋರುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಇರದ ಕಠಿಣ ನಿಯಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಯಾಕೆ ಎಂದು ಪೋಲೀಸರ ಜೊತೆ ಸಾರ್ವಜನಿಕರು ವಾದ ನಡೆಸಿದ್ದಾರೆ. ಇದು ದ ಕ.ಜಿಲ್ಲೆಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸೋಮವಾರ 690 ದೋಷಪೂರಿತ ನಂಬರ್ ಪ್ಲೇಟ್ ಪತ್ತೆಯಾಗಿದ್ದು, 3,45, 000ರೂ ದಂಡ ವಸೂಲಿಯಾಗಿದೆ. ಮಂಗಳೂರು ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ 206 ದೋಷ ಪೂರಿತ ನಂಬರ್ ಪ್ಲೇಟ್ ಪತ್ತೆಯಾಗಿದ್ದು, 1,03,000 ದಂಡ ವಸೂಲಿಯಾಗಿದೆ ಎಂದು ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಮೂಲಗಳು ತಿಳಿಸಿದೆ.

Edited By : Nagesh Gaonkar
Kshetra Samachara

Kshetra Samachara

28/09/2021 10:25 pm

Cinque Terre

17.43 K

Cinque Terre

12

ಸಂಬಂಧಿತ ಸುದ್ದಿ