ಮುಲ್ಕಿ: ಜೀವನದಲ್ಲಿ ಕರ್ತವ್ಯನಿಷ್ಠೆ ಪ್ರಾಮಾಣಿಕತೆ ಮುಖ್ಯವಾಗಿದ್ದು ಮುಲ್ಕಿ ಗೃಹರಕ್ಷಕದಳದ ಘಟಕಾಧಿಕಾರಿಯಾಗಿ ಉತ್ತಮ ಮಾನವೀಯ ಸೇವೆ ಸಲ್ಲಿಸಿ ಮುಖ್ಯಮಂತ್ರಿ ಪದಕಗಳಿಸಿರುವ ಮನ್ಸೂರ್ ರವರ ಕಾರ್ಯ ವೈಖರಿ ಇತರರಿಗೆ ಮಾದರಿ ಎಂದು ಮುಲ್ಕಿ ಪೋಲೀಸ್ ಠಾಣಾ ನಿರೀಕ್ಷಕ ಕುಸುಮಾಧರ ಹೇಳಿದರು.
ಮುಲ್ಕಿ ಪೋಲೀಸ್ ಠಾಣೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿ ಪದಕ ಪಡೆದಿರುವ ಮನ್ಸೂರ್ ರವರನ್ನು ಅಭಿನಂದಿಸಿ ಮಾತನಾಡಿದರು.ಈ ಸಂದರ್ಭ ಮನ್ಸೂರ್ ರವರನ್ನು ಮೂಲ್ಕಿ ಠಾಣಾ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.ಠಾಣೆಯ ನಿಯೋಜಿತ ಉಪನಿರೀಕ್ಷಕಿ ಫೈಜುನ್ನೀಸಾ, ಸಹಾಯಕ ಉಪ ನಿರೀಕ್ಷಕ ಉಮೇಶ್,ಹೆಡ್ ಕಾನ್ಟೇಬಲ್ ಪವನ್ ಕುಮಾರ್,ಸಿಬ್ಬಂದಿಗಳಾದ ಪ್ರಮೋದ್ ದೇವಾಡಿಗ,ಸಬೀಹ ಬಾನು, ಸಂಜೀವ ಮತ್ತಿತರರು ಹಾಜರಿದ್ದರು.
Kshetra Samachara
02/09/2021 07:08 pm