ಮಂಗಳೂರು: ಐಟಿ ಇಲಾಖೆ ಮೂರನೇ ದಿನವೂ ತಮ್ಮ ಬೇಟೆಯನ್ನು ಮುಂದುವರಿಸಿದ್ದು, ಅಗತ್ಯ- ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದೆ.
ನಗರದ ಪ್ರತಿಷ್ಠಿತ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಾದ ಯೆನೆ ಪೋಯ ಆಸ್ಪತ್ರೆ, ಎ.ಜೆ. ಶೆಟ್ಟಿ ಆಸ್ಪತ್ರೆ, ಶ್ರೀನಿವಾಸ ಕಾಲೇಜು, ಕಣಚೂರು ಗ್ರೂಪ್ ಆಫ್ ಕಾಲೇಜಿನ ಮಾಲೀಕರ ಒಡೆತನಕ್ಕೆ ಸೇರಿರುವ ಮನೆ, ಕಚೇರಿ, ಆಸ್ಪತ್ರೆ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಇಂದು ಕೂಡ ಐಟಿ ಇಲಾಖೆ ಪರಿಶೀಲನೆ ಮುಂದುವರಿಸಿದೆ.
ಅಲ್ಲದೆ, ಶಾಸಕ ಯು.ಟಿ.ಖಾದರ್ ಸಹೋದರ ಇಫ್ತಿಕಾರ್ ಮನೆಯಲ್ಲಿಯೂ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು, ಪರಿಶೀಲನೆ ಮುಂದುವರಿಸಲಾಗಿದೆ. ಅಲ್ಲದೆ, ಇಫ್ತಿಕಾರ್ ಮನೆಯಲ್ಲಿ ಇರದಿರುವ ಹಿನ್ನೆಲೆಯಲ್ಲಿ ಅವರು ಬರುವವರೆಗೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುವುದು ಮುಂದುವರಿಸಲಿದ್ದಾರೆ ಎಂದು ತಿಳಿದು ಬಂದಿದೆ.
Kshetra Samachara
19/02/2021 03:02 pm