ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಾರ್ನಾಡು ಗೇರುಕಟ್ಟೆ ಉದ್ಯಮಿ ಮನೆಗೆ ಐಟಿ ರೈಡ್

ಮುಲ್ಕಿ: ಮುಲ್ಕಿ-ಮೂಡಬಿದ್ರೆ ರಾಜ್ಯ ಹೆದ್ದಾರಿಯ ಕಾರ್ನಾಡು ಗೇರುಕಟ್ಟೆ ಬಳಿ ಬೆಳ್ಳಂಬೆಳಗ್ಗೆ ಉದ್ಯಮಿಯೊಬ್ಬರ ಮನೆಗೆ ಇನ್ಕಮ್ ಟ್ಯಾಕ್ಸ್ ಅಧಿಕಾರಿಗಳು ದಾಳಿ ಮಾಡಿದ ಬಗ್ಗೆ ವರದಿಯಾಗಿದೆ. ಐಟಿ ಅಧಿಕಾರಿಗಳು ಬೆಳಗ್ಗೆ ಏಳು ಗಂಟೆ ಸುಮಾರಿಗೆ ಸ್ವಿಫ್ಟ್ ಕಾರ್ ನಲ್ಲಿ ಬಂದ ಅಧಿಕಾರಿಯೊಬ್ಬರು ಸ್ಥಳ ಪರಿಶೀಲನೆ ನಡೆಸಿದ್ದಾರೆ . ಅರ್ಧ ಗಂಟೆ ಬಳಿಕ ಏಕಾಏಕಿ ಇನೋವಾ ಕಾರಿನಲ್ಲಿ ಬಂದ ಐಟಿ ಅಧಿಕಾರಿಗಳ ತಂಡ ರಾಜ್ಯ ಹೆದ್ದಾರಿ ರಸ್ತೆ ತಡೆ ಇದ್ದರೂ ಸಿನಿಮೀಯ ಮಾದರಿಯಲ್ಲಿ ಮನೆಯೊಳಗೆ ಹೋಗಿದ್ದಾರೆ. ಬಳಿಕ ಮನೆಯೊಳಗೆ ದಾಖಲೆ ಪತ್ರಕ್ಕಾಗಿ ಜಾಲಾಡಿದ್ದು ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಉದ್ಯಮಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ .ಉದ್ಯಮಿಯ ಪತ್ನಿಯ ತಮ್ಮನ ಮನೆ ಮುಲ್ಕಿ ಸಮೀಪದ ಹಳೆಯಂಗಡಿಯಲ್ಲಿ ಇದ್ದು ಅಲ್ಲಿಗೆ ಐಟಿ ದಾಳಿ ನಡೆದಿದೆ.ಮಂಗಳೂರಿನಲ್ಲಿ ಏನಪೋಯ ಸಹಿತ ಅನೇಕ ಸಂಸ್ಥೆಗಳಿಗೆ ಇಂದು ಬೆಳಿಗ್ಗೆ ಐಟಿ ದಾಳಿ ನಡೆದಿದ್ದು ಸಂಸ್ಥೆಯಲ್ಲಿ ಕಾರ್ನಾಡು ಗೇರುಕಟ್ಟೆ ಉದ್ಯಮಿಯ ಮಗ ವೈದ್ಯಕೀಯ ವೃತ್ತಿ ನಡೆಸಿದ್ದು ಅದರ ಮೂಲದಿಂದಲೇ ಮುಲ್ಕಿ ಹಾಗೂ ಹಳೆಯಂಗಡಿಯಲ್ಲಿ ಉದ್ಯಮಿಯ ಮನೆಗೆ ಐಟಿ ದಾಳಿ ನಡೆದಿದೆ

Edited By : Manjunath H D
Kshetra Samachara

Kshetra Samachara

17/02/2021 11:01 am

Cinque Terre

20.69 K

Cinque Terre

3

ಸಂಬಂಧಿತ ಸುದ್ದಿ