ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಾಬರಿ ತೀರ್ಪು ಹಿನ್ನೆಲೆ; ಆಯಕಟ್ಟಿನ‌ ಸ್ಥಳಗಳಲ್ಲಿ ಭದ್ರತೆ

ಉಡುಪಿ: ಇಂದು ಬಾಬರಿ ಮಸೀದಿಯ ತೀರ್ಪು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಕೃಷ್ಣನಗರಿಯ ಆಯಕಟ್ಟಿನ‌ ಸ್ಥಳಗಳಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.

ಮುಖ್ಯವಾಗಿ ಧಾರ್ಮಿಕ ಕೇಂದ್ರಗಳೆನಿಸಿದ ಶ್ರೀಕೃಷ್ಣಮಠ, ನಗರದ ಮಸೀದಿ ಮತ್ತಿತರ ಕಡೆಗಳಲ್ಲಿ ಮುಂಜಾನೆಯಿಂದಲೇ ಪೊಲೀಸರನ್ನು ನಿಯೋಜಿಸಲಾಗಿದೆ. ಇದೊಂದು ಮುಂಜಾಗರೂಕತೆಗಾಗಿ ತೆಗೆದುಕೊಂಡ ಕ್ರಮ ಎಂದು ಪೊಲೀಸ್ ಮೂಲಗಳು ಸ್ಪಷ್ಟ ಪಡಿಸಿವೆ.

ಈ ಹಿಂದೆ ಅಯೋಧ್ಯೆ ತೀರ್ಪು ಬಂದಾಗಲೂ ಉಡುಪಿಯ ಧಾರ್ಮಿಕ ಕೇಂದ್ರಗಳ ಆಸುಪಾಸಿನಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.

Edited By : Nagesh Gaonkar
Kshetra Samachara

Kshetra Samachara

30/09/2020 12:53 pm

Cinque Terre

31.64 K

Cinque Terre

3

ಸಂಬಂಧಿತ ಸುದ್ದಿ