ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಳಲಿ ಮಸೀದಿ ವಿವಾದ ಪ್ರಕರಣ; ವಿಚಾರಣೆ ಜೂನ್ 9ಕ್ಕೆ ಮುಂದೂಡಿದ ನ್ಯಾಯಾಲಯ

ಮಂಗಳೂರು: ನ್ಯಾಯಾಲಯದ ಮೆಟ್ಟಿಲೇರಿರುವ ಮಳಲಿ ಮಸೀದಿ ವಿವಾದ ಪ್ರಕರಣವು ಇಂದು ಜಿಲ್ಲಾ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ವಾದ-ವಿವಾದವನ್ನು ಆಲಿಸಿರುವ ನ್ಯಾಯಾಧೀಶರು ಜೂನ್ 9ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.

ನಗರದ ಹೊರವಲಯದಲ್ಲಿರುವ ಮಳಲಿ ಮಸೀದಿ ನವೀಕರಣಕ್ಕೆ ಕೆಡವಿರುವ ವೇಳೆ ಹಿಂದೂ ದೇವಾಲಯ ಶೈಲಿಯ ಕಟ್ಟಡ ಪತ್ತೆಯಾಗಿತ್ತು. ಈ ವಿವಾದವೀಗ ಕೋರ್ಟ್ ಮೆಟ್ಟಿಲೇರಿದ್ದು, ಮಂಗಳೂರಿನ ಜಿಲ್ಲಾ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಇಂದು ನಡೆದ ವಿಚಾರಣೆಯಲ್ಲಿ ಮಸೀದಿಯ ವ್ಯಾಪ್ತಿಯ ಬಗ್ಗೆ ವಾದ-ವಿವಾದ ನಡೆಯಿತು. ಮಸೀದಿಯ ಆಡಳಿತ ಮಂಡಳಿಯ ಪರ ವಕೀಲರು ಇಂದು ವಾದ ಮಂಡಿಸಿದ್ದಾರೆ. ಆದರೆ ವಿಎಚ್ ಪಿ ಪರ ವಕೀಲರಿಗೆ ವಾದ ಮಂಡಿಸಲು ಜೂನ್ 9ರಂದು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯನ್ನು ಜೂನ್ 9ರಂದು ಮುಂದೂಡಲಾಗಿದೆ.

Edited By : Nirmala Aralikatti
Kshetra Samachara

Kshetra Samachara

06/06/2022 08:31 pm

Cinque Terre

4.86 K

Cinque Terre

0

ಸಂಬಂಧಿತ ಸುದ್ದಿ