ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು ಬೆಳ್ಳಾರೆ ರಸ್ತೆಯಲ್ಲಿ ಪ್ರವೀಣ್ ಅಂತಿಮಯಾತ್ರೆ: ರಸ್ತೆಯುದ್ದಕ್ಕೂ ಸಾವಿರಾರು ಕಾರ್ಯಕರ್ತರು

ಪುತ್ತೂರು: ದುಷ್ಕರ್ಮಿಗಳಿಂದ ಕೊಲೆಯಾದ ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರು ಅವರ ಶವಯಾತ್ರೆ ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಬುಧವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಹೊರಟು ಬೆಳ್ಳಾರೆಗೆ ತಲುಪಿದೆ.

ಪುಷ್ಪಾಲಂಕೃತ ಆಂಬುಲೆನ್ಸ್‌ನಲ್ಲಿ ಪ್ರವೀಣ್ ನೆಟ್ಟಾರು ಅವರ ಮೃತದೇಹ ಸಾಗುತ್ತಿದ್ದರೆ, ಹಿಂಬದಿಯಿಂದ ಸಂಘಟನೆ ವತಿಯಿಂದ ಕೊಡುಗೆಯಾಗಿ ನೀಡಿದ ಇನ್ನೆರಡು ಆಂಬುಲೆನ್ಸ್‌ಗಳು ಹಿಂಬಾಲಿಸುತ್ತಿದೆ. ನೂರಾರು ಹಿಂದೂ ಸಂಘಟನೆ ಮುಖಂಡರು, ಕಾರ್ಯಕರ್ತರು ಶವಯಾತ್ರೆಯ ಜೊತೆಗೆ ಪಾದಯಾತ್ರೆಯಲ್ಲಿ ಸಾಗುತ್ತಿದ್ದಾರೆ.

ಹಲವು ಕಡೆಗಳಲ್ಲಿ ಅಂತಿಮ ದರ್ಶನ

ದರ್ಬೆ ವೃತ್ತದ ಬಳಿ ಸಾವಿರಾರು ಮಂದಿ ಮೃತದೇಹದ ಅಂತಿಮ ದರ್ಶನ ಪಡೆದರು. ಇನ್ನು ಸವಣೂರು, ಕಾಣಿಯೂರು, ನಿಂತಿಕಲ್, ಬೆಳ್ಳಾರೆ ಪೇಟೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಸ್ತೆಯುದ್ಧಕ್ಕೂ ಪೊಲೀಸ್ ಬಂದೋಬಸ್ತ್ ಏರ್ಪಡಿಸುತ್ತಿದ್ದಾರೆ.

Edited By : Somashekar
PublicNext

PublicNext

27/07/2022 12:37 pm

Cinque Terre

39.9 K

Cinque Terre

1

ಸಂಬಂಧಿತ ಸುದ್ದಿ