ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ : ಉಡುಪಿ ಪೊಲೀಸರ ಸಮಯ ಪ್ರಜ್ಞೆ: ಕೈ ಕುಯ್ದು ಆತ್ಮಹತ್ಯೆಗೆ ಯತ್ನಿಸಿದಾತ ಬಚಾವ್ !

ಉಡುಪಿ: ಉಡುಪಿ ನಗರ ಠಾಣೆಯ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದಾತನನ್ನು ಬಚಾವ್ ಮಾಡಿದ್ದಾರೆ.ರೋಹನ್ ರಾಜೇಶ್ ಜತ್ತನ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ. ಈತ

ಉಡುಪಿ ನಗರದ ಖಾಸಗಿ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ತಕ್ಷಣ ವಿಷಯ ತಿಳಿದ ನಗರ ಪೊಲೀಸರು ಲಾಡ್ಜ್ ಗೆ ದೌಡಾಯಿಸಿದ್ದಾರೆ.ಅಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ವ್ಯಕ್ತಿಯನ್ನು ಪೊಲೀಸರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.ಉಡುಪಿ ನಗರಠಾಣೆ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ರೋಹನ್ ನನ್ನು ರಕ್ಷಣೆ ಮಾಡಲಾಯಿತು.ಸೂಕ್ತ ಚಿಕಿತ್ಸೆ ನೀಡಿ ರೋಹನ್ ನನ್ನು ಸದ್ಯ ವೈದ್ಯರು ಬದುಕಿಸಿದ್ದಾರೆ.

ಕೌಟುಂಬಿಕ ಸಮಸ್ಯೆಯಿಂದ ಖಿನ್ನತೆಗೆ ಒಳಗಾಗಿದ್ದ ಈ ವ್ಯಕ್ತಿ,ಕೈ ಕುಯ್ದುಕೊಂಡು ಮಂಗಳೂರಿನ ಸ್ನೇಹಿತನಿಗೆ ಕರೆಮಾಡಿದ್ದ.ಉಡುಪಿ ಪೊಲೀಸರ ಸಮಯಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆಯಿಂದ ರೋಹನ್ ಸದ್ಯ ಬಚಾವಾಗಿದ್ದಾನೆ.

Edited By : Nirmala Aralikatti
PublicNext

PublicNext

02/06/2022 08:15 pm

Cinque Terre

36.73 K

Cinque Terre

0

ಸಂಬಂಧಿತ ಸುದ್ದಿ