ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಹಿಳಾ ಸುರಕ್ಷಿತೆಗಾಗಿ ಮಂಗಳೂರು ಪೊಲೀಸರಿಂದ 112 ಬಗ್ಗೆ ಜಾಗೃತಿ ಅಭಿಯಾನ...

ಮಂಗಳೂರು: ಮೈಸೂರು ಗ್ಯಾಂಗ್ ರೇಪ್ ಘಟನೆ ಬಳಿಕ ಹೈ ಅಲರ್ಟ್ ಆದ ಮಂಗಳೂರು ಪೊಲೀಸರಿಂದ ಮಹಿಳಾ ಸುರಕ್ಷತೆಗಾಗಿ ಒಂದು ದಿನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ERSS ವೆಹಿಕಲ್ ಹೆಚ್ಚಿನ ಬಳಕೆ ಮಾಡುವಂತೆ ಜಾಗೃತಿ ಕಾರ್ಯ ಮಾಡಲಾಯಿತು. ನಗರದ ಪೊಲೀಸ್ ಕಮಿಷನರ್ ಕಚೇರಿ ಬಳಿ ಇಅರ್ ಎಸ್ ಎಸ್ ವಾಹನಕ್ಕೆ ಒಲಿಂಪಿಯನ್ ಎಂ ಅರ್ ಪೂವಮ್ಮ ಹಸಿರು ನಿಶಾನೆ ತೋರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.

ಮಂಗಳೂರು ನಗರ ಪೊಲೀಸರು ಅಯೋಜಿಸಿರುವ ಮಹಿಳಾ ಸುರಕ್ಷತೆಗಾಗಿ ಒಂದು ದಿನ ಕಾರ್ಯಕ್ರಮ ಮಹಿಳೆಯರಲ್ಲಿ ಧೈರ್ಯ ತುಂಬುವ ಪ್ರಕ್ರಿಯೆಯಾಗಿದೆ.ಅದರಲ್ಲೂ ಸಾಮನ್ಯ ಮಹಿಳೆಯರಿಗೆ ಅವರ ಉದ್ಯೋಗ ,ಶಿಕ್ಷಣ ಮಾತ್ರವಲ್ಲದೆ ಮನೆಗಳಲ್ಲಿಯೂ ಸುರಕ್ಷತೆಯ ಭರವಸೆಯನ್ನು ನೀಡುವಲ್ಲಿ ಓ ಸಹಾಯವಾಣಿ ಉಪಯುಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ಪೊಲೀಸ್ ಅಯುಕ್ತ ಎನ್ ಶಶಿಕುಮಾರ್ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಒಲಿಂಪಿಯನ್ ಸ್ಪರ್ಧಿ ಎಮ್ ಅರ್ ಪೂವಮ್ಮ ಹಾಗೂ ಅವರ ತಾಯಿ ಜಾನಕಿ ಉಪಸ್ಥಿತಿಯಲ್ಲಿ ನಗರದ ಅಥೆನಾ ಆಸ್ಪತ್ರೆಯಲ್ಲಿ ಇಅರ್ ಎಸ್ ಎಸ್ - 112 ಸಹಾಯವಾಣಿ ಕಾರ್ಯಚರಣೆ ಕುರಿತು ಅಣುಕು ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಮಿಷನರ್ ಎನ್ ಶಶಿಕುಮಾರ್ ಅವರು ಯಾವುದೇ ತುರ್ತು ಸಂದರ್ಭಗಳಲ್ಲಿ ಮಹಿಳೆಯಾರಗಲಿ ಅಥವಾ ಇತರ ಯಾರೇ ಅಗಲಿ 112ಗೆ ಕರೆ ಮಾಡಿದಾಗ ನಗರ ವ್ಯಾಪ್ತಿಯಲ್ಲಿ ಸ್ಥಳೀಯ ಠಾಣೆಯ ಪೊಲೀಸರು ಕನಿಷ್ಠ 5 ರಿಂದ 10 ನಿಮಿಷಗಳಲ್ಲಿ ಹಾಗೂ ಹೊರವಲಯದಲ್ಲಿದ್ದಾರೆ 15 ನಿಮಿಷಗಳೊಳಗೆ ಘಟನಾ ಸ್ಥಳಕ್ಕೆ ಅಗಮಿಸಿ ಸಮಸ್ಯೆ ನಿವಾರಿಸಲಿದ್ದಾರೆ ಎಂದರು.

Edited By : Manjunath H D
Kshetra Samachara

Kshetra Samachara

28/08/2021 02:11 pm

Cinque Terre

9.47 K

Cinque Terre

0

ಸಂಬಂಧಿತ ಸುದ್ದಿ