ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೊರಗ ಸಮುದಾಯದ ಆರೋಗ್ಯನಿಧಿ ಯೋಜನೆ ರದ್ದು ಆದೇಶ ಹಿಂಪಡೆಯಿರಿ: ಕಾಂಗ್ರೆಸ್

ಉಡುಪಿ: ಕೊರಗ ಸಮುದಾಯಕ್ಕೆ ಈ ಹಿಂದೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಅನಾರೋಗ್ಯ ನಿಮಿತ್ತ ಚಿಕಿತ್ಸೆ ಪಡೆದುಕೊಂಡಲ್ಲಿ ಅದರ ಸಂಪೂರ್ಣ ವೆಚ್ಚವನ್ನು I.T.D.P ಇಲಾಖೆ ಭರಿಸುವ ವ್ಯವಸ್ಥೆಯನ್ನು ಮಾಡಿತ್ತು. ಆದರೆ ಇದೀಗ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೂಲಕ 'ಈ ಯೋಜನ ರದ್ದುಗೊಂಡಿದೆ' ಎಂದು ಆದೇಶ ಹೊರಡಿಸಿರುವುದು ಕೊರಗ ಸಮುದಾಯಕ್ಕೆ ಎಸಗಿದ ದ್ರೋಹ. ಈ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕೆಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.

ಇವತ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಹರೀಶ್ ಕಿಣಿ ,ಈಗಾಗಲೇ ಅಲ್ಪಸಂಖ್ಯಾತರ ಮೇಲೆ ಹಲವು ಅಸಂವಿಧಾನಿಕ ಕ್ರಮ ಕೈಗೊಂಡಿರುವ ಬಿಜೆಪಿ ಸರಕಾರ ಇದೀಗ ಹಿಂದುಳಿದಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 15 ರಿಂದ 16 ಸಾವಿರ ಜನಸಂಖ್ಯೆ ಇರುವ ಪರಿಶಿಷ್ಟ ಪಂಗಡದ ಕೊರಗ ಜನಾಂಗದ ಜನರಿಗೆ ಗೌರವಯುತವಾಗಿ ಬದುಕಲು ತೊಂದರೆಯೊಡ್ಡುತ್ತಿದ್ದಾರೆ. ಅವರ ಆಹಾರ ಕ್ರಮದ ಬಗ್ಗೆ ಈಗಾಗಲೇ ಪರಿವಾರ ಸಂಘಟನೆಗಳ ಮೂಲಕ ತಡೆಯೊಡ್ಡುತ್ತಿದ್ದು ಈಗ ವೈದ್ಯಕೀಯ ನೆರವಿನ ಯೋಜನೆಯನ್ನೂ ಕಸಿದುಕೊಂಡಿದೆ.

ಈ ಬಗ್ಗೆ ಕೂಡಲೇ ಆದೇಶ ಹಿಂಪಡೆದು ಅವರಿಗೆ ನೆರವಾಗಬೇಕೆಂದು ಕಾಂಗ್ರೆಸ್ ಪಕ್ಷ ಅಗ್ರಹಿಸುತ್ತದೆ. ಇದನ್ನೆಲ್ಲ ನೋಡುವಾಗ ಬಿಜೆಪಿ ತನ್ನ ಹಿಡನ್ ಅಜೆಂಡಾವನ್ನುಅನುಷ್ಠಾನಗೊಳಿಸಲು ಹೊರಟಂತಿದೆ. ಮುಂದಿನ ದಿನಗಳಲ್ಲಿ ಕೊರಗ ಸಮುದಾಯದವರೊಂದಿಗೆ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ, ಸಾಮಾಜಿಕ ಕಾರ್ಯಕರ್ತರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಕೈಜೋಡಿಸುವವರಿದ್ದೇವೆ ಎಂದು ಹೇಳಿದ್ದಾರೆ.

Edited By : Somashekar
Kshetra Samachara

Kshetra Samachara

06/09/2022 04:18 pm

Cinque Terre

4.87 K

Cinque Terre

0

ಸಂಬಂಧಿತ ಸುದ್ದಿ