ಮಂಗಳೂರು: ನಗರದ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ನನ್ನನ್ನು ಹಿಂಬಾಲಿಸಿಕೊಂಡು ಬಂದು ಕೊಲೆ ಯತ್ನ ನಡೆಸಿದ್ದಾರೆಂದು ಹಾಗೂ ಇಂಟರ್ ನೆಟ್ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ದೂರು ಕೊಟ್ಟಿದ್ದಾರೆ. ಆದ್ರೆ ಕೊಲೆ ಯತ್ನ ಸುಳ್ಳು. ಕರೆ ಬಂದಿರೋದು ನಿಜ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ವ್ಯಕ್ತಿಯೊಬ್ಬರು ಕಂಕನಾಡಿ ಠಾಣೆಗೆ ಆಗಮಿಸಿ ತನಗೆ ಇಂಟರ್ನೆಟ್ ಮೂಲಕ ಬೆದರಿಕೆ ಕರೆ ಬಂದಿರುವುದಾಗಿ ಹಾಗೂ ತನ್ನನ್ನು ಯಾರೋ ಎರಡು ಮೂರು ಬೈಕ್ ಗಳಲ್ಲಿ ಹಿಂಬಾಲಿಸುತ್ತಿರುವುದಾಗಿ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಇಂಟರ್‌ನೆಟ್ ಮೂಲಕ ಆ ವ್ಯಕ್ತಿಗೆ ಮೂರ್ನಾಲ್ಕು ಬಾರಿ ಕರೆ ಬಂದಿರುವುದು ಸಾಬೀತಾಗಿದೆ. ಕರೆಯ ಮೂಲಕ ತನಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದಾಗಿ ಆ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದು, ಆ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು. ಆ ವ್ಯಕ್ತಿಯು ದೂರಿನಲ್ಲಿ ತಿಳಿಸಿರುವಂತೆ ಯಾರೋ ಹಿಂಬಾಲಿಸಿಕೊಂಡು ಬಂದ ಬಗ್ಗೆ ಸಿಸಿಟಿ ಕ್ಯಾಮರಾ ಫೂಟೇಜ್ ಪರಿಶೀಲೀದಾಗ ಅದು ಫುಡ್ ಡೆಲಿವರಿಯ ವಾಹನವಾಗಿದ್ದು, ಅದು ದೂರು ನೀಡಿರುವ ವ್ಯಕ್ತಿಯ ಪಕ್ಕದ ಮನೆಗೆ ಆರ್ಡರ್ ಪೂರೈಕಾಗಿ ಬಂದಿತ್ತು. ಈ ಬಗ್ಗೆ ದೂರುದಾರರಿಗೂ ಮನವರಿಕೆಯಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕರಣದ ಕುರಿತಂತೆ ಕೊಲೆ ಯತ್ನ ನಡೆದಿದೆ.
ಬೈಕ್‌ಗಳಲ್ಲಿ ವ್ಯಕ್ತಿಯೊಬ್ಬರನ್ನು ಹಿಂಬಾಲಿಸಿಕೊಂಡು ಬರಲಾಗಿದೆ. ವ್ಯಕ್ತಿ ಅದೆಲ್ಲದರಿಂದ ತಪ್ಪಿಸಿಕೊಂಡು ಮನೆ ತಲುಪಿದ್ದಾರೆ ಎಂದೆಲ್ಲಾ ತಪ್ಪಾಗಿ ಸುದ್ದಿಯಾಗಿತ್ತು. ಅಂತಹದ್ದೇನೂ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು. ದೂರುದಾರನಿಗೆ ಇಂಟರ್‌ನೆಟ್ ಕರೆ ಬಂದಿರುವುದಕ್ಕೂ ಆ ವ್ಯಕ್ತಿ ಪಂಪ್‌ವೆಲ್‌ನಿಂದ ಹೋಗುವ ಸಂದರ್ಭ ಗಾಡಿಗಳಲ್ಲಿ ತನ್ನನ್ನು ಯಾರೋ ಹಿಂಬಾಲಿಸುತ್ತಿರುವುದಾಗಿ ಅನಿಸಿತ್ತು ಎಂದು ಹೇಳಿಕೊಂಡಿದ್ದಾರೆ. ಅಂತಹ ಭಾವನೆ ಮೂಡುವುದು ಸಹಜ, ಇಂತಹ ಸಂದರ್ಭಗಳಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು, ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದಲ್ಲಿ ಇಂತಹ ಸುದ್ದಿಗಳನ್ನು ಬ್ರೇಕಿಂಗ್ ಆಗಿ ಹರಿಯಬಿಡುವುದರಿಂದ ಸಾಮಾಜಿಕ ಶಾಂತಿಗೆ ತೊಂದರೆಯಾಗುತ್ತದೆ ಎಂದರು.
Kshetra Samachara
09/08/2022 08:13 pm