ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಶಾಲೆ ಉಳಿವಿಗೆ ಪ್ರಧಾನಿಗೇ ಪತ್ರ ಬರೆದಳು ಈ ವಿದ್ಯಾರ್ಥಿನಿ

ಹಿರಿಯಡ್ಕ; ತಾನು ಕಲಿತ ಶಾಲೆಯನ್ನು ಮುಚ್ಚಬಾರದು ಎಂದು ಬಾಲಕಿಯೊಬ್ಬಳು ಸ್ವತಃ ಪ್ರಧಾನಿ ಮೋದಿಗೇ ಪತ್ರ ಬರೆದಿದ್ದಾಳೆ, ಈಕೆ ಬರೆದ ಪತ್ರಕ್ಕೆ ಸ್ವತ: ಪ್ರಧಾನಿ ಕಾರ್ಯಾಲಯ ಸ್ಪಂದಿಸಿದೆ.

ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪದ ಪಂಚನಬೆಟ್ಟು ವಿದ್ಯಾವರ್ಧಕ ಅನುದಾನಿತ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದೆ. ಇದೇ ಕಾರಣಕ್ಕೆ ಮತ್ತೊಂದು ಶಾಲೆಯೊಂದಿಗೆ ಈ ಶಾಲೆಯನ್ನು ವಿಲೀನಗೊಳಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಶಾಲೆಯ ಶಿಕ್ಷಕರನ್ನು ಬೇರೆ ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಿ ಆದೇಶಿಸಿದೆ. ಈ ನಡುವೆ ಗ್ರಾಮಸ್ಥರು ಈ ಪ್ರಕ್ರಿಯೆಯನ್ನು ವಿರೋಧಿಸಿದ ಕಾರಣ ಅವರ ಮನವಿಯ ಮೇರೆಗೆ ಶಿಕ್ಷಣ ಇಲಾಖೆ ಒಂದು ಕಲಿಕೆಗೆ ಅನುಮತಿಯನ್ನೇನೂ ನೀಡಿತ್ತು.

ಈ ಮಧ್ಯ ಶಾಲೆಯ ವಿದ್ಯಾರ್ಥಿನಿ ವರ್ಷಿತ ಆರ್ ಎಂಬ ಬಾಲಕಿ ಪ್ರಧಾನಿ ಕಾರ್ಯಾಲಯಕ್ಕೆ ಒಂದು ಪತ್ರ ಬರೆದಿದ್ದಳು. ಪಂಚನಬೆಟ್ಟು ಶಾಲೆಯನ್ನು ಉಳಿಸಿ ಕೊಡಬೇಕೆಂದು ಮನವಿ ಮಾಡಿದ್ದಳು.

ಈ ಪರಿಸರದ ಸುಮಾರು ಹದಿನೈದು ಕಿಲೋಮೀಟರ್ ವ್ಯಾಪ್ತಿಯ ಮಕ್ಕಳಿಗೆ ಈ ಶಾಲೆಯಿಂದ ಅನುಕೂಲವಾಗುತ್ತದೆ. ಶಾಲೆ ಮುಚ್ಚಿದರೆ ಎಂಟು ಕಿಲೋಮೀಟರ್ ದೂರದ ಬೈಲೂರಿಗೆ ಹೋಗಬೇಕಾಗುತ್ತದೆ. ಗ್ರಾಮಾಂತರ ಪ್ರದೇಶದ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಿ ಎಂದು ಕೋರಿಕೊಂಡಿದ್ದಳು. ಮನವಿಗೆ ಸ್ಪಂದಿಸಿರುವ ಪ್ರಧಾನಿ ಕಾರ್ಯಾಲಯ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ. ಶಾಲೆ ಉಳಿಸಿಕೊಳ್ಳುವ ಬಗ್ಗೆ ಪರಾಮರ್ಶಿಸಿ ಉತ್ತರಿಸುವಂತೆ ಸೂಚನೆ ನೀಡಿದೆ.

Edited By :
Kshetra Samachara

Kshetra Samachara

14/10/2020 05:57 pm

Cinque Terre

45.95 K

Cinque Terre

18

ಸಂಬಂಧಿತ ಸುದ್ದಿ