ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ
ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ಸಮೀಪ ಮಿಷನ್ ಕಂಪೌಂಡ್ ಬಳಿ ಸರ್ವೀಸ್ ರಸ್ತೆಯ ಬದಿ ಗುಡ್ಡ ಕುಸಿತವಾಗಿದ್ದು, ಗುಡ್ಡದಲ್ಲಿ ಅಪಾಯಕಾರಿ ಮರಗಳು ಬೀಳುವ ಸ್ಥಿತಿಯಲ್ಲಿತ್ತು. ಅನಾಹುತ ಸಂಭವಿಸುವ ಮೊದಲೇ ಸಂಬಂಧಪಟ್ಟ ಇಲಾಖೆ ಎಚ್ಚೆತ್ತು ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು ಹಾಗೂ ನೂರಾರು ವಾಹನಗಳು ಓಡಾಡುವ ಸರ್ವೀಸ್ ರಸ್ತೆ ಬದಿ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಪಬ್ಲಿಕ್ ನೆಕ್ಸ್ಟ್ ಮೂಲಕ ಸಂಬಂಧಪಟ್ಟವರನ್ನು ಆಗ್ರಹಿಸಿದ್ದರು.
ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಎಚ್ಚೆತ್ತ ಮಿಷನ್ ಚರ್ಚ್ ನ ಆಡಳಿತ ವರ್ಗ ಅರಣ್ಯ ಇಲಾಖೆಯ ಪರವಾನಿಗೆ ಪಡೆದು ಅಪಾಯಕಾರಿ ಮರಗಳನ್ನು ತೆರವುಗೊಳಿಸಿದೆ. ಕೂಡಲೇ ಹೆದ್ದಾರಿ ಇಲಾಖೆ ಗುಡ್ಡ ಕುಸಿತಕ್ಕೆ ತಡೆಗೋಡೆ ನಿರ್ಮಿಸಿ ಅಪಾಯವನ್ನು ತಡೆಗಟ್ಟಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.
Kshetra Samachara
31/07/2022 05:30 pm