ಮಂಗಳೂರು: ರಾಜ್ಯದ 179 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಹಲವರು ವರ್ಗಾವಣೆಗೊಂಡಿದ್ದಾರೆ.
ಬರ್ಕೆ ಠಾಣೆಯಿಂದ ಜ್ಯೋತಿರ್ಲಿಂಗ ಹೊನಕಟ್ಟಿ ಅವರನ್ನು ಬೆಂಗಳೂರು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿದ್ದ ಅಶೋಕ್ ಪಿ. ಅವರನ್ನು ಉತ್ತರ ಕನ್ನಡ ಮಹಿಳಾ ಠಾಣೆಗೆ ವರ್ಗಾಯಿಸಲಾಗಿದೆ.
ಮಂಗಳೂರು ಸಿಸಿಆರ್‌ಬಿಯಲ್ಲಿದ್ದ ಸಿದ್ದಗೌಡ ಭಜಂತ್ರಿ ಕಂಕನಾಡಿ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಪಾಂಡೇಶ್ವರ ಠಾಣೆಯಲ್ಲಿದ್ದ ಎ.ಸಿ ಲೋಕೇಶ್ ಮಂಗಳೂರು ಮಹಿಳಾ ಠಾಣೆಗೆ ಹಾಗೂ ಗುಪ್ತವಾರ್ತೆಯಲ್ಲಿದ್ದ ಮಂಜುನಾಥ್ ಪಾಂಡೇಶ್ವರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ದಕ್ಷಿಣ ಸಂಚಾರ ಠಾಣೆಯಲ್ಲಿದ್ದ ಗುರುದತ್ ಕಾಮತ್ ಸಿಸಿಆರ್‌ಬಿಗೆ ಮತ್ತು ಬಾಗಲಕೋಟೆ ಬದಾಮಿ ವೃತ್ತದಲ್ಲಿದ್ದ ರಮೇಶ್ ಎಚ್. ಹನಾಪುರ ಮಂಗಳೂರು ದಕ್ಷಿಣ ಸಂಚಾರ ಠಾಣೆಗೆ ವರ್ಗಾವಣೆಯಾಗಿದ್ದಾರೆ. ಡಿಸಿಆರ್‌ಇನಿಂದ ವಿನಾಯಕ ಬಿಲ್ಲವ ಎಸಿಬಿಗೆ ವರ್ಗವಾದರೆ ಮಂಗಳೂರು ಮಹಿಳಾ ಠಾಣೆಯಿಂದ ರೇವತಿ ಎನ್. ಸಿಎಸ್‌ಪಿಗೆ ವರ್ಗಾವಣೆಯಾಗಿದ್ದಾರೆ.
PublicNext
24/04/2022 12:29 pm