ಉಡುಪಿ: ಮದ್ಯ ಪ್ರಿಯರು ಇನ್ನೂ ಹೊಸ ವರ್ಷದ ಗುಂಗಿನಲ್ಲಿದ್ದರೆ, ಇತ್ತ ಅಬಕಾರಿ ಇಲಾಖೆ ಲೀಟರುಗಟ್ಟಳೆ ಅಕ್ರಮ ಮದ್ಯವನ್ನು ನಾಶ ಮಾಡಿದೆ. ಉಡುಪಿ ಜಿಲ್ಲಾ ಅಬಕಾರಿ ಇಲಾಖೆಯಲ್ಲಿ ಮಾನವ ಸೇವನೆಗೆ ಯೋಗ್ಯವಲ್ಲದ, ಮಾರಾಟವಾಗದೆ ಉಳಿದಿರುವ ಮದ್ಯವನ್ನು ಕರ್ನಾಟಕ ರಾಜ್ಯ ಪಾನೀಯ ನಿಗಮವು ಉಡುಪಿ ಡಿಪೋದ ಬಳಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನಾಶಪಡಿಸಿದೆ.
ಉಡುಪಿ ಜಿಲ್ಲಾ ಉಪ ಅಧೀಕ್ಷಕಿ ಜ್ಯೋತಿ ಅವರ ಸಮಕ್ಷಮದಲ್ಲಿ 746.505 ಲೀಟರ್ ವೈನ್ , 1505.345 ಲೀಟರ್ ಮದ್ಯ ಹಾಗೂ 2769 ಲೀಟರ್ ಬಿಯರ್ ನ್ನು ಆಳವಾದ ಹೊಂಡ ತೋಡಿ ಅದರಲ್ಲಿ ಹೂಳಲಾಯಿತು. ಈ ಸಂದರ್ಭ
ಡಿಪೋ ಮ್ಯಾನೇಜರ್ ಗುರುಮೂರ್ತಿ, ಡಿಪೋ ವ್ಯವಸ್ಥಾಪಕ ಸಂತೋಷ್ ರಾವ್ ಹಾಗೂ ಮಾರಾಟ ಪ್ರತಿನಿಧಿಗಳು ಉಪಸ್ಥಿತರಿದ್ದರು.
Kshetra Samachara
03/01/2022 11:54 am