ಉಡುಪಿ: ಸಾಮಾನ್ಯವಾಗಿ ಹೊಸವರ್ಷದ ಹೊಸ್ತಿಲಲ್ಲಿ ಉಡುಪಿಯ ಬೀಚುಗಳು ಪ್ರವಾಸಿಗರಿಂದ ತುಂಬಿರುತ್ತವೆ. ಅದರಲ್ಲೂ ಕೂಡ ಯುವಜನತೆ ಹೊಸವರ್ಷವನ್ನು ಕಡಲ ಕಿನಾರೆಯಲ್ಲಿ ಆಚರಿಸುವುದು ನಡೆದುಕೊಂಡು ಬಂದ ಪದ್ಧತಿ.
ಆದರೆ, ಈ ವರ್ಷ ಕೊರೊನಾ ಮಹಾಮಾರಿ ಎಲ್ಲ ಸಂಭ್ರಮವನ್ನೂ ಹೊಸಕಿ ಹಾಕಿದೆ.
ಜಿಲ್ಲೆಯ ಅಷ್ಟೂ ಬೀಚುಗಳಲ್ಲಿ ಸೆಕ್ಷನ್ 144 ಜಾರಿ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಮಲ್ಪೆ, ಕಾಪು, ಮರವಂತೆ ಸಹಿತ ಜಿಲ್ಲೆಯ ಯಾವುದೇ ಬೀಚ್ ಗಳಲ್ಲಿ ಜನರು ಸೇರಿ ಸಂಭ್ರಮ ಆಚರಿಸುವಂತಿಲ್ಲ ಎಂದು ಡಿ.ಸಿ. ಖಡಕ್ ಆದೇಶ ಮಾಡಿದ್ದಾರೆ. ಸೆಕ್ಷನ್ ಆದೇಶ ಇಂದು ಸಂಜೆ 6ರಿಂದ ನಾಳೆ 6 ಗಂಟೆ ತನಕ ಜಾರಿಯಲ್ಲಿದೆ.
Kshetra Samachara
31/12/2020 07:25 pm