ಮಂಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಕಾಜೆ ಪೇಟೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅನಧಿಕೃತವಾಗಿ ತಳ್ಳುಗಾಡಿಯನ್ನು ಗೂಡಂಗಡಿ ಶಾಲಾ ಮುಂಭಾಗ ಕಾರ್ಯಾಚರಿಸಿಕೊಂಡು ಬರುತ್ತಿದ್ದು, ಅದನ್ನು ನಿಯಮ ಪ್ರಕಾರ ನೋಟಿಸ್ ನೀಡಿ ತೆರವುಗೊಳಿಸಲಾಗಿದೆ, ಇದು ಯಾವುದೇ ವೈಯಕ್ತಿಕ ದ್ವೇಷದಿಂದಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಮಂಚಿ ಗ್ರಾಪಂ ಅಧ್ಯಕ್ಷೆ ಪುಷ್ಪಾ ಕಾಮತ್ ಹೇಳಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವರು ಅನಾರೋಗ್ಯಕ್ಕೊಳಗಾಗಿರುವುದಕ್ಕೆ ಗ್ರಾಪಂ ಆಡಳಿತವಾಗಲೀ, ಅಧಿಕಾರಿ ವರ್ಗವಾಗಲೀ ಕಾರಣ ಎಂಬರ್ಥದ ಸಂದೇಶಗಳು ಬರುತ್ತಿದ್ದು, ಅದಕ್ಕೆ ನಾವು ಕಾರಣರಲ್ಲ, ಅವರು ಶೀಘ್ರ ಚೇತರಿಕೆಯಾಗಲಿ ಎಂದು ನಾವೂ ಹಾರೈಸುತ್ತೇವೆ, ಅವರಿಗೆ ಮಾನಸಿಕ ಕಿರುಕುಳ ನೀಡುವ ಉದ್ದೇಶವಾಗಲೀ ಪಂಚಾಯಿತಿಗೆ ಇಲ್ಲ, ಸತತ ದೂರುಗಳು ಬಂದ ಹಿನ್ನೆಲೆಯಲ್ಲಿ ತೆರವು ಮಾಡಬೇಕಾಯಿತು, ಈ ಮೊದಲೇ ಅವರಿಗೆ ವಿಷಯದ ಕುರಿತು ತಿಳಿಸಿದ್ದೆವು. 2019ರಲ್ಲೇ ದೂರುಗಳು ಬಂದಾಗ ಮಾನವೀಯ ನೆಲೆಯಲ್ಲಿ ಅವರಿಗೆ ಅಂಗಡಿ ನಡೆಸಲು ಬಿಡಲಾಗಿತ್ತು, ಆದರೆ ಸತತ ದೂರುಗಳು ಬಂದಾಗ ನಿಯಮ ಪಾಲನೆ ಮಾಡಲಾಗಿದೆ. ನೋಟಿಸ್ ನೀಡಿದ ಸಂದರ್ಭ ಹಿತಶತ್ರುಗಳು ಗೂಡಂಗಡಿ ತೆರವುಗೊಳಿಸದಂತೆ ಕುಮ್ಮಕ್ಕು ನೀಡಿದ್ದರು ಎಂದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಮೋಹನದಾಸ ಶೆಟ್ಟಿ, ಪ್ರಮುಖರಾದ ಪ್ರಭಾಕರ ಶೆಟ್ಟಿ, ಪ್ರಮೀಳಾ, ಕೃಷ್ಣಪ್ಪ ಮೋಹನ ಪ್ರಭು, ವಿಜಯಾ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
01/09/2022 06:32 pm