ಉಡುಪಿ: ಉಡುಪಿಯಲ್ಲಿ ಕಾಲೇಜು ಪ್ರಾರಂಭವಾಗಿ ಮೂರು ದಿನಗಳಾಗಿವೆ. ಇವತ್ತಿಗೆ ಜಿಲ್ಲೆಯಲ್ಲಿ ಪರಿಸ್ಥಿತಿ ಸಂಪೂರ್ಣ ಶಾಂತವಾಗಿದೆ. ಮುಖ್ಯವಾಗಿ ಉಡುಪಿಯ ಎಮ್‌ಜಿಎಮ್ ಕಾಲೇಜಿನಲ್ಲಿ ಫೆಬ್ರವರಿ ಎಂಟರಂದು ದೊಡ್ಡಮಟ್ಟದ ದಾಂಧಲೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಎಂಜಿಎಂ ಕಾಲೇಜಿಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ.
ಇಲ್ಲಿ ಹತ್ತು ದಿನಗಳ ಬಳಿಕ ತರಗತಿಗಳು ಪ್ರಾರಂಭವಾಗಲಿವೆ. ಇಂದು ಪದವಿ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಪರೀಕ್ಷೆಗಾಗಿ ಕಾಲೇಜು ತೆರೆಯಲಾಗಿದೆ. ಈ ಸಂಬಂಧ ಮಾಧ್ಯಮದ ಜತೆ ಮಾತನಾಡಿದ ಎಎಸ್ಪಿ ಟಿ.ಎಸ್ ಸಿದ್ದಲಿಂಗಪ್ಪ, ಜಿಲ್ಲೆಯಲ್ಲಿ ಪರಿಸ್ಥಿತಿ ಶಾಂತವಾಗಿದೆ. ಎಲ್ಲೂ ಅಹಿತಕರ ಘಟನೆಗಳು ನಡೆದಿಲ್ಲ. ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
Kshetra Samachara
18/02/2022 01:31 pm