ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಕಳ್ಳನನ್ನು ಹಿಡಿದ ಎಎಸ್ಐಗೆ ಮಂಗಳೂರು ಕಮಿಷನರ್ ಅಭಿನಂದನೆ, 10 ಸಾವಿರ ರೂ. ನಗದು ಬಹುಮಾನ

ಮಂಗಳೂರು: ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಕಳ್ಳನನ್ನು ಹಿಡಿದು ಪ್ರಶಂಸೆಗೆ ಪಾತ್ರರಾದ ಎಎಸ್ಐ ವರುಣ್ ಆಳ್ವ ಅವರನ್ನು ಸನ್ಮಾನಿಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್​​ 10 ಸಾವಿರ ರೂ. ನಗದು ಬಹುಮಾನ ನೀಡಿ ಅಭಿನಂದಿಸಿದ್ದಾರೆ.

ಮೊನ್ನೆ ವ್ಯಕ್ತಿಯೋರ್ವರ ಮೊಬೈಲ್ ಕಳವುಗೈದ ತಂಡದಲ್ಲಿದ್ದ ಓರ್ವ ಆರೋಪಿಯನ್ನು ಹಿಡಿಯಲು ಎಎಸ್ಐ ವರುಣ್ ಆಳ್ವ ಅವರು ಸಿನಿಮೀಯ ರೀತಿಯಲ್ಲಿ ಒಂದು ಕಿ.ಮೀ.ಗಿಂತಲೂ ಅಧಿಕ ದೂರ ಬೆನ್ನಟ್ಟಿದ್ದಾರೆ. ಈ ರೀತಿ ಅವರು ಚೇಸ್ ಮಾಡುವ ವೀಡಿಯೋ ಭಾರೀ ವೈರಲ್ ಆಗಿ ದೇಶಾದ್ಯಂತ ಪ್ರಶಂಸೆಗೆ ಪಾತ್ರವಾಗಿತ್ತು. ವರುಣ್ ಆಳ್ವ ಅವರು ಮಾಡಿರುವ ಸಾಧನೆಗೆ ಮಂಗಳೂರು ನಗರ ಕಮಿಷನರ್ ಈ ನಗದು ಬಹುಮಾನ ನೀಡಿದ್ದಾರೆ.

ಮಂಗಳೂರನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ವ್ಯಕ್ತಿಯೋರ್ವರು ಎಂದಿನಂತೆ ಕೆಲಸ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸಂದರ್ಭ ಆರೋಪಿಗಳು ಅವರ ಮೊಬೈಲ್ ಕಿತ್ತು ಓಟಕ್ಕಿತ್ತಿದ್ದಾರೆ. ಈ ಸಂದರ್ಭ ವ್ಯಕ್ತಿ ಅವರನ್ನು ಬೆನ್ನಟ್ಟಿದ್ದಾರೆ. ಆಗ ಅಲ್ಲಿಯೇ ಇದ್ದ ಪೊಲೀಸರು ಬೆನ್ನಟ್ಟಿ ಓರ್ವನನ್ನು ಬಂಧಿಸಿದಾಗ ಆತ ಮೊಬೈಲ್ ಕಿತ್ತು ಪರಾರಿಯಾಗಿರೋದು ತಿಳಿದು ಬಂದಿದೆ‌. ಅಷ್ಟರಲ್ಲಾಗಲೇ ಮತ್ತೋರ್ವನು ಅಲ್ಲಿಂದ ಪರಾರಿಯಾಗಿದ್ದ. ಆಗ ಪೊಲೀಸರು ಉಪಾಯದಿಂದ ಬಂಧಿತ ಆರೋಪಿಯ ಮೂಲಕವೇ ಪರಾರಿಯಾದವನಿಗೆ ಫೋನ್ ಕರೆ ಮಾಡಿಸಿದ್ದಾರೆ‌. ಬಳಿಕ ಆತನಿದ್ದ ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಬಂಧಿಸಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆತ ಪೊಲೀಸರನ್ನು ತಳ್ಳಿ ಓಡಲಾರಂಭಿಸಿದ್ದಾನೆ. ಆದರೆ ತಕ್ಷಣ ಅಲರ್ಟ್ ಆದ ವರಣ್ ಆಳ್ವ ಅವರು ಬೆನ್ನಟ್ಟಿ ಆತನನ್ನು ಹೆಡೆಮುರಿ ಕಟ್ಟಿ ಬಂಧಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

14/01/2022 05:36 pm

Cinque Terre

24.87 K

Cinque Terre

5

ಸಂಬಂಧಿತ ಸುದ್ದಿ