ಮುಲ್ಕಿ: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇ ಆರ್ ಎಸ್ ಎಸ್-112 ರ ಅಡಿಯಲ್ಲಿ "ಮಹಿಳೆಯ ಸುರಕ್ಷತೆಗಾಗಿ ಒಂದು ದಿನ" ಕಾರ್ಯಕ್ರಮ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ನಡೆಯಿತು
ಕಾರ್ಯಕ್ರಮದಲ್ಲಿ ಮುಲ್ಕಿ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಕುಸುಮಾಧರ ಮಾತನಾಡಿ ಮೈಸೂರಿನಲ್ಲಿ ಯುವತಿಯೊಬ್ಬಳ ಮೇಲೆ ನಡೆದ ಅಮಾನವೀಯ ಘಟನೆಗೆ ಸಂಬಂಧಪಟ್ಟಂತೆ ಮಂಗಳೂರು ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಹಿಳೆಯ ಸುರಕ್ಷತೆಯ ಬಗ್ಗೆ ತಿಳಿಸಿ ಮಹಿಳೆಯರು ಆದಷ್ಟು ರಾತ್ರಿಹೊತ್ತು ತಿರುಗಾಡುವುದನ್ನು ನಿಲ್ಲಿಸಿ ಯಾವುದೇ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದರೆ ಠಾಣೆಗೆ ಮಾಹಿತಿ ನೀಡಲು ತಿಳಿಸಿದರು
ಮಹಿಳೆಯರಿಗೆ 24*7 ಗಂಟೆಗಳಲ್ಲಿ ಯಾವುದೇ ಕಷ್ಟ ಬಂದರೂ112 ನಂಬರಿಗೆ ಸಂಪರ್ಕಿಸಿದರೆ ಕೂಡಲೇ ಪರಿಹಾರ ನೀಡಲು ಸಿದ್ಧ ಎಂದರು.ಈ ಸಂದರ್ಭ ಜಾರಂದಾಯ ದೈವಸ್ಥಾನದ ಗುರಿಕಾರ ಡಾ. ಹರಿಶ್ಚಂದ್ರ ಸಾಲಿಯಾನ್ ಮಾತನಾಡಿ ಮಹಿಳೆಯರು ಜಾಗೃತರಾಗಿ ಧೈರ್ಯವಂತರಾಗಿ ಎಂದರು ಈ ಸಂದರ್ಭ ದೈವಸ್ಥಾನದ ಅಧ್ಯಕ್ಷ ಪ್ರಕಾಶ್ ಸುವರ್ಣ, ಮಾಜಿ ಅಧ್ಯಕ್ಷ ರಾಘು ಸುವರ್ಣ, ಕಾರ್ಯದರ್ಶಿ ಹರೀಶ್ ಸುವರ್ಣ, ಕೋಶಾಧಿಕಾರಿ ರಮಾನಾಥ್ ಸುವರ್ಣ, ಮಹಿಳಾ ಮಂಡಳಿ ಅಧ್ಯಕ್ಷೆ ಲತಾ ಎಸ್ ಪೂಜಾರಿ. ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ, ಮೆನ್ನಬೆಟ್ಟು, ಕಾರ್ನಾಡು, ಮೂಲ್ಕಿ ಹಳೆಯಂಗಡಿ, ಪಕ್ಷಿಕೆರೆ ಸುರಗಿರಿ, ಪಡುಪಣಂಬೂರು, ಬಳಕುಂಜೆ, ಐಕಳ, ಅತಿಕಾರಿಬೆಟ್ಟು ಸಹಿತ ವಿವಿಧ ಕಡೆಗಳಲ್ಲಿ ನಡೆಯಿತು.
Kshetra Samachara
28/08/2021 06:18 pm