ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಡ್ರಗ್ಸ್‌‌‌ ನಂಟು: ಆಂಕರ್ ಅನುಶ್ರೀಗೆ CCB ನೋಟಿಸ್‌‌

ಮಂಗಳೂರು: ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಿರೂಪಕಿ, ನಟಿ ಅನುಶ್ರೀ ಅವರಿಗೆ ಮಂಗಳೂರು ಸಿಸಿಬಿ ಪೊಲೀಸರು ಸಮನ್ಸ್​ ಜಾರಿ ಮಾಡಿದ್ದಾರೆ.

ಡ್ರಗ್‌ ಮಾಫಿಯಾಕ್ಕೆ ಸಂಬಂಧಿಸಿದಂತೆ ಡ್ಯಾನ್ಸರ್‌ ಕಿಶೋರ್ ಶೆಟ್ಟಿ ಬಂಧಿಸಿರುವ ಮಂಗಳೂರಿನ ಸಿಸಿಬಿ ಪೊಲೀಸರು ಈ ಪ್ರಕರಣದ ಸಂಬಂಧ ಅನುಶ್ರೀ ಅವರಿಗೆ ವಾಟ್ಸಾಪ್‌ನಲ್ಲಿ ನೋಟಿಸ್‌ ನೀಡಿದ್ದಾರೆ ಎನ್ನಲಾಗಿದೆ

ಕಿಶೋರ್ ಅಮನ್ ಶೆಟ್ಟಿ ಆಪ್ತ ಸ್ನೇಹಿತ ತರುಣ್ ಅನುಶ್ರೀಯ ಜೊತೆ ಪಾರ್ಟಿ ಮಾಡಿದ್ದ. ವಿಚಾರಣೆಯ ಸಂದರ್ಭದಲ್ಲಿ ಈ ವಿಚಾರ ತಿಳಿಸಿದ್ದಕ್ಕೆ ಸಿಸಿಬಿಯಿಂದ ಅನುಶ್ರೀಗೆ ನೋಟಿಸ್‌ ಜಾರಿ ಮಾಡಲಾಗಿದೆ.

ಅನುಶ್ರೀ ಅವರಿಗೆ ನೋಟಿಸ್‌ ನೀಡಲು ಸಿಸಿಬಿ ತಂಡ ಬೆಂಗಳೂರಿಗೆ ಹೊರಟಿದೆ ಎಂದು ಹೇಳಲಾಗಿದೆ.

Edited By :
Kshetra Samachara

Kshetra Samachara

24/09/2020 03:38 pm

Cinque Terre

38.85 K

Cinque Terre

4

ಸಂಬಂಧಿತ ಸುದ್ದಿ