ಮರವಂತೆ: ಕೊರೋನಾ ಮೂರನೇ ಅಲೆಯ ಆತಂಕದ ನಡುವೆಯೂ ಬೀಚ್ ನತ್ತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಮಾಸ್ಕ್ ಇಲ್ಲದೆ ,ಸಾಮಾಜಿಕ ಅಂತರವಿಲ್ಲದೆ ಬೀಚ್ ನಲ್ಲಿ ನೂರಾರು ಜನ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪ್ರಸಿದ್ಧ ಮರವಂತೆ ಬೀಚ್ ಇಂದು ಪ್ರವಾಸಿಗರಿಂದ ತುಂಬಿದೆ.ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕವೇ ಇರುವ ಮರವಂತೆ ಬೀಚ್ ಗೆ ಹೊರ ರಾಜ್ಯ ಮತ್ತು ಹೊರ ಜಿಲ್ಲೆಯ ಪ್ರವಾಸಿಗರು ಆಗಮಿಸುತ್ತಾರೆ.ಈ ಹೆದ್ದಾರಿಯಾಗಿ ಸಾಗುವಾಗ ಇಲ್ಲೊಂದು ಸ್ಟಾಪ್ ಕೊಟ್ಟು ಕೊಂಚ ರಿಲ್ಯಾಕ್ಸ್ ಆಗುತ್ತಾರೆ.
ಇದು ಸಹಜ ಕೂಡ.ಆದರೆ ಸದ್ಯ ಕೋವಿಡ್ ನಿಯಮಾವಳಿ ಚಾಲ್ತಿಯಲ್ಲಿರುವುದರಿಂದ ಪ್ರವಾಸಿಗರು ಒಂದೇ ಕಡೆ ಮಾಸ್ಕ್,ಮತ್ತು ಸಾಮಾಜಿಕ ಅಂತರ ಇಲ್ಲದೇ ಸೇರುವುದು ಎಷ್ಟು ಸರಿ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.ಸ್ಥಳೀಯಾಡಳಿತ ಇತ್ತ ಕಡೆ ಗಮನ ಹರಿಸಬೇಕಿದೆ.
Kshetra Samachara
02/08/2021 09:35 pm