ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಚಿತ್ರರಂಗದಲ್ಲಿ ನನ್ನ ಬೆಳವಣಿಗೆ ಸಹಿಸದ ಮಂದಿಯಿಂದ ಅಪಪ್ರಚಾರ; ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ

ಮಂಗಳೂರು: ಕಳೆದ ಕೆಲವು ದಿನಗಳಿಂದ ತುಳುಚಿತ್ರ ನಿರ್ದೇಶಕರೊಬ್ಬರ ಬಗ್ಗೆ ಅವಹೇಳನಕಾರಿ ಬರಹದ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಸ್ಪಷ್ಟನೆ ನೀಡಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು. ನಾನು ಕಳೆದ 5 ವರ್ಷಗಳಿಂದ ತುಳು ಹಾಗೂ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಕಲಾ ಸೇವೆ ಮಾಡುತ್ತಾ ಬಂದಿದ್ದೇನೆ.

ತುಳುವರ ಪ್ರೀತಿ, ಗೌರವ ಉಳಿಸಿಕೊಂಡು ಬಂದಿದ್ದು, ಈಗಾಗಲೇ 2 ತುಳು ಹಾಗೂ 2 ಕನ್ನಡ ಚಿತ್ರವನ್ನು ನಿರ್ದೇಶಿಸಿದ್ದೇನೆ. ನನ್ನ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿ ಜನರು ನನ್ನ ಸಿನಿಮಾ ಮೆಚ್ಚಿಕೊಂಡಿದ್ದಾರೆ.

ಇದೀಗ ನಾನು 'ಮುಂಬೈ ಟು ಭಟ್ಕಳ' ಎಂಬ ಕನ್ನಡ ಸಿನಿಮಾ ತಯಾರಿಸುತ್ತಿದ್ದು,ಇದರ ಜೊತೆಗೆ ಒಂದು ತುಳು ಚಿತ್ರದ ಕೆಲಸ ಕೂಡ ಪೂರ್ಣಗೊಂಡಿದೆ. ಆದರೆ, ನನ್ನ ಚಿತ್ರರಂಗದ ಬೆಳವಣಿಗೆ ಸಹಿಸದ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.

ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಅವಹೇಳನಕಾರಿ ಬರಹಗಳ ಪೋಸ್ಟ್ ಗಳು ಹರಿದಾಡುತ್ತಿದೆ. ಇದು ನನ್ನ ಮನಸ್ಸಿಗೆ ಆಘಾತ, ಘಾಸಿ ಉಂಟುಮಾಡಿದೆ.

ನಾನು ಎಲ್ಲ ಧರ್ಮಗಳ ದೇವರ ಮೇಲೆ ನಂಬಿಕೆ ಇಟ್ಟವನಾಗಿದ್ದು, ಎಲ್ಲ ಧರ್ಮಕ್ಕೂ ತಲೆಬಾಗುತ್ತೇನೆ. ಇಷ್ಟೇ ಅಲ್ಲದೆ, ಚಿತ್ರದ ನಾಯಕಿಯರನ್ನು ದುರುಪಯೋಗಪಡಿಸುತ್ತೇನೆ ಎಂದು ನನ್ನ ವಿರುದ್ಧ ಅಪವಾದ ಹೊರಿಸಲಾಗುತ್ತಿದೆ.

'ಮುಂಬೈ to ಭಟ್ಕಳ' ಚಿತ್ರದ ಕಥೆಯನ್ನು ತಿಳಿದುಕೊಳ್ಳದೆ, ಸಿನಿಮಾ ಲವ್ ಜಿಹಾದ್ ಬಗ್ಗೆ ಇದೆ ಎಂದು ತಪ್ಪಾಗಿ ತಿಳಿದುಕೊಂಡು ನನ್ನ ಬಗ್ಗೆ ಹಾಗೂ ಚಿತ್ರ ತಂಡದ ಬೆಳವಣಿಗೆಯನ್ನು ನಿಲ್ಲಿಸಲು ಯಾರೋ ಕಿಡಿಗೇಡಿಗಳು ನನ್ನ ಹಾಗೂ ಚಿತ್ರದ ಬಗ್ಗೆ ಷಡ್ಯಂತ್ರ ಹೂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ‌

ಈ ಬಗ್ಗೆ ಸೈಬರ್ ಕ್ರೈಂಗೆ ದೂರು ನೀಡಿದ್ದು, ನನ್ನ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಎಲ್ಲ ರೀತಿಯ ತಯಾರಿ ಮಾಡಿದ್ದೇನೆ ಎಂದರು.

Edited By : Manjunath H D
Kshetra Samachara

Kshetra Samachara

25/12/2020 06:02 pm

Cinque Terre

22.35 K

Cinque Terre

3

ಸಂಬಂಧಿತ ಸುದ್ದಿ