ಮಂಗಳೂರು/ಉಡುಪಿ: ರೂಪಾಂತರ ಕೊರೊನಾ ಭೀತಿ ಈಗ ರಾಜ್ಯಾದ್ಯಂತ ಇದೆ. ಇದರ ತಡೆಗಾಗಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಹೀಗಾಗಿ ಈ ಅವಧಿಯಲ್ಲಿನ ಎಲ್ಲ ಜಾತ್ರೆಗಳು, ದೈವಾರಾಧನೆ, ಜಾತ್ರೆ ಸಹಿತ ಎಲ್ಲ ಕಾರ್ಯಕ್ರಮಗಳನ್ನು ರಾತ್ರಿ 11ಗಂಟೆಯ ಒಳಗಾಗಿ ಮುಗಿಸಬೇಕೆಂದು ಸೂಚಿಸಲಾಗಿದೆ.
ಹೆಚ್ಚಾಗಿ ಕರಾವಳಿ ಭಾಗದಲ್ಲಿ ನಡೆಯುವ ಯಕ್ಷಗಾನ, ದೈವಾರಾಧನೆ, ಪೂಜೆ, ಅಥವಾ ಇನ್ನಿತರ ಧಾರ್ಮಿಕ ವಿಧಿವಿಧಾನಗಳನ್ನು ಬೇಗ ಶುರು ಮಾಡಿ ರಾತ್ರಿ 11ರೊಳಗಾಗಿ ಮುಗಿಸುವ ಅನಿವಾರ್ಯತೆ ಬಂದಿದೆ.
ಈ ಬಗ್ಗೆ ಸ್ಪಷ್ಟ ಆದೇಶ ಹೊರಡಿಸಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಪ್ರವಾಸಕ್ಕೆ ಬರುವ ಯಾವುದೇ ಪ್ರವಾಸಿಗಳಿಗೆ ನಿರ್ಭಂಧ ಇಲ್ಲ. ಆದ್ರೆ ಲೇಟ್ ನೈಟ್ ಪಾರ್ಟಿಗಳನ್ನು ಮಾಡುವಂತಿಲ್ಲ ಎಂದಿದ್ದಾರೆ.
ಕಟೀಲು ದುರ್ಗಾಪರಮೇಶ್ವರಿ ಮೇಳದ ಯಕ್ಷಗಾನ ಡಿಸೆಂಬರ್ 24ರಿಂದ ತಾತ್ಕಲಿಕವಾಗಿ ಕಾಲಮಿತಿಯಲ್ಲಿ ನಡೆಯಲಿದೆ. ಅದರಂತೆ ಮಂದಾರ್ತಿ ಮೇಳದ ಬಯಲಾಟ ಸಾಯಂಕಾಲ 5-30ಕ್ಕೆ ಆರಂಭಗೊಂಡು ರಾತ್ರಿ 11 ಗಂಟೆಗೆ ಮುಗಿಯಲಿದೆ.
Kshetra Samachara
24/12/2020 01:52 pm