ಉಡುಪಿ: ಕೇಂದ್ರ ಸರ್ಕಾರದ ರೈತ ವಿರೋಧಿ ಖಾಯಿದೆ ಕುರಿತು ಇಂದು ರೈತ ಸಂಘಟನೆಗಳು ನೀಡಿದ್ದ ಭಾರತ ಬಂದ್ ಕರೆಗೆ ಕ್ರಷ್ಣ ನಗರಿ ಉಡುಪಿ ಜಿಲ್ಲೆಯಲ್ಲಿ ಯಾವುದೇ ಪ್ರತಿಕ್ರಿಯೆ ಕಂಡು ಬಂದಿಲ್ಲ. ಬಹುತೇಕ ಕಡೆ ಜನಜೀವನ ಎಂದಿನಂತಿದ್ದು, ಬಂದ್‌ಗೆ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.ರಾಜ್ಯಾದ್ಯಂತ ರೈತ ಸಂಘಟನೆಗಳು ವಿವಿಧ ಸಂಘಟನೆಗಳೊಂದಿಗೆ ಸೇರಿ ಜಾಥಾ, ಪ್ರತಿಭಟನೆಗಳನ್ನು ನಡೆಸುತ್ತಿವೆ. ಉಡುಪಿ ಜಿಲ್ಲೆಯಲ್ಲಿ ಖಾಸಗಿ ,ಸರ್ಕಾರಿ ಬಸ್‌ಗಳು ಮತ್ತು ಆಟೋ ಸಂಚರಿಸುತ್ತಿದ್ದು ಹಾಗೆ ನಗರದಲ್ಲಿ ಪ್ರಯಾಣಿಕರ ಸಂಖ್ಯೆ ಎಂದಿನಂತೆ ಇದೆ. ಇನ್ನು ಬಂದ್ ಎಫೆಕ್ಟ್ ಕರಾವಳಿಯಲ್ಲಿ ಮಾರುಕಟ್ಟೆ ವಹಿವಾಟಿನ ಮೇಲೂ ಯಾವುದೇ ಪರಿಣಾಮ ಬೀರಿಲ್ಲ.
ರಾಜ್ಯದಲ್ಲಿ ವಿಪಕ್ಷ ನಾಯಕರುಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರರೂ ಕೂಡಾ ಕರಾವಳಿ ಜಿಲ್ಲೆಯಲ್ಲಿ ಬಂದ್ ಗೆ ಬೆಂಬಲಿಸಿಲ್ಲ ಇನ್ನೂ ಸಾರ್ವಜನಿಕರು ಮತ್ತು ಅಂಗಡಿ ಮಾಲೀಕರು ಬಂದ್ ಕರೆ ನಮಗಲ್ಲ ಎನ್ನುವ ರೀತಿಯಲ್ಲಿ ವರ್ತನೆಯಲ್ಲಿದ್ದಾರೆ ಜಿಲ್ಲೆಯ ಹಲವು ನಗರ ಪ್ರದೇಶಗಳಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಎರ್ಪಡಿಸಲಾಗಿದೆ
Kshetra Samachara
08/12/2020 07:57 pm