ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: 'ಶಿರೂರು ಟೋಲ್ ಕಂಪನಿಯವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ': ಅನ್ಸಾರ್ ಅಹಮದ್

ಬೈಂದೂರು: ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್‌ನಲ್ಲಿ ನಿನ್ನೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ಕು ಜನ ಸಾವನಪ್ಪಿದ್ದಾರೆ.ಅಪಘಾತ ನಡೆದ ವಿಡಿಯೋವನ್ನು ಗಮನಿಸುವಾಗ ಸಿಬ್ಬಂದಿಯವರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನವೇ ಇದಕ್ಕೆ ಕಾರಣ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ತುರ್ತು ವಾಹನಗಳು ಸಂಚರಿಸುವ ದಾರಿಯಲ್ಲಿ ಟೋಲ್ ಗೇಟ್ ಸಿಬ್ಬಂದಿಯವರು ಎರಡೆರಡು ಕಡೆ ಬ್ಯಾರಿಕೇಡ್‌ಗಳನ್ನು ಇಟ್ಟಿದ್ದಾರೆ. ಮತ್ತು ಬಹಳ ಹೊತ್ತಿನಿಂದ ದನಗಳು ರಸ್ತೆಯಲ್ಲಿ ಮಲಗಿದ್ದರೂ ಸಹ ಅದರ ಬಗ್ಗೆ ಗಮನ ಹರಿಸಿಲ್ಲ. ಆದ್ದರಿಂದ ಉಡುಪಿ ಜಿಲ್ಲಾಧಿಕಾರಿಯವರು ಟೋಲ್ ಗೇಟ್ ಕಂಪೆನಿಯವರ ವಿರುದ್ಧ ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಸಾವನ್ನಪ್ಪಿರುವವರ ಕುಟುಂಬಕ್ಕೆ ಕನಿಷ್ಠ 30 ಲಕ್ಷ ರೂಪಾಯಿ ತುರ್ತು ಪರಿಹಾರವನ್ನು ಟೋಲ್ ಕಂಪೆನಿಯವರಿಂದ ಕೊಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ಆಗ್ರಹಿಸಿದ್ದಾರೆ.

Edited By :
Kshetra Samachara

Kshetra Samachara

21/07/2022 04:32 pm

Cinque Terre

9.92 K

Cinque Terre

2

ಸಂಬಂಧಿತ ಸುದ್ದಿ