ಮಂಗಳೂರು: ಮಂಗಳೂರಿನ ಕೂಳೂರು ನದಿಗೆ ವ್ಯಕ್ತಿಯೋರ್ವರು ನದಿಗೆ ಹಾರಿದ್ದಾರೆ. ಈ ಬಗ್ಗೆ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಸ್ಥಳಕ್ಕೆ ಕಾವೂರು ಮತ್ತು ಪಣಂಬೂರು ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ನದಿಗೆ ಹಾರಿರುವ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಮಾಹಿತಿ ನೀಡಿದವರೂ ಸ್ಥಳದಿಂದ ತೆರಳಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳ, ಈಜುಗಾರರಿಗೆ ಮಾಹಿತಿ ನೀಡಿದ್ದಾರೆ.
Kshetra Samachara
03/11/2020 02:51 pm