ಬ್ರಹ್ಮಾವರ : ತೆಂಗಿನ ಚಿಪ್ಪು ಬಳಸಿ ಕಲಾಕೃತಿ ನಿರ್ಮಿಸುವ ರಾಜ್ಯದ ಏಕೈಕ ಕಲೆಗಾರ ಉಡುಪಿ ಪಡು ಅಲೆವೂರಿನಲ್ಲಿರುವ ವೆಂಕಟರಮಣ ಭಟ್ ತೀರಾ ಸಂಕಷ್ಟದಲ್ಲಿದ್ದಾರೆ.
ಹೌದು ! ಉಡುಪಿ ಬೈಲೂರಿನಿಂದ ದಾವಣಗೆರೆಗೆ ವಲಸೆ ಹೋದ ಭಟ್ಟರ ಪೂರ್ವಿಕರು ಹೋಟೆಲ್ ಉದ್ಯಮದಲ್ಲಿದ್ದರು.
ಬಿ.ಎಸ್ಸಿ ಪದವಿ ಪಡೆದ ಭಟ್ ಆಯ್ಕೆ ಮಾಡಿಕೊಂಡಿದ್ದು ಕಲಾ ಬದುಕನ್ನು ಹವ್ಯಾಸವಾಗಿ ಬಳಸಿ ಎಸೆಯುವ ತೆಂಗಿನ ಚಿಪ್ಪುವಿನಲ್ಲಿ ಕಲಾ ಸೃಷ್ಟಿಯ ಕುಶಲತೆಯನ್ನು ರೂಢಿಸಿಕೊಂಡು ಹೊಸ ಕಲೆ ಸೃಷ್ಟಿಯನ್ನು ಮಾಡಿದವರು.
ಗಣಪತಿ, ರಾಘವೇಂದ್ರ ಸ್ವಾಮಿ, ಆದಿಶಂಕರಾಚಾರ್ಯ, ಮಧ್ವಾಚಾರ್ಯ, ವಾದಿರಾಜ ಸ್ವಾಮಿ, ಏಸುಕ್ರೀಸ್ತ, ಶಾಕುಂತಲೆ, ವಿವೇಕಾನಂದ, ಮಹಾತ್ಮಾಗಾಂಧಿ ಅನೇಕ ಕಲಾಕೃತಿಗಳು ಇವರಿಂದ ಜೀವ ತಳೆದು, ನಾಡಿನ ಅನೇಕ ಭಾಗದಲ್ಲಿ ಇವರ ಕಲೆ ಪ್ರದರ್ಶನ ಕಂಡು ಜನಮೆಚ್ಚುಗೆ ಗಳಿಸಿದ್ದಾರೆ.
4 ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿದ 74 ವರ್ಷದ ಭಟ್ಟರು ಹೃದಯಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು ದಾವಣಗೆರೆ ತೊರೆದು ಉಡುಪಿ ಬಳಿಯ ಅಲೆವೂರಿನಲ್ಲಿ ಪತ್ನಿ ವಿಜಯ ಭಟ್'ರೊಂದಿಗೆ ಬಂಧುಗಳ ಮನೆಯೊಂದರಲ್ಲಿ ಅವರು ರಚಿಸಿದ ಕಲಾಕೃತಿಯೊಂದಿಗೆ ನೆಲೆಸಿದ್ದಾರೆ.
ಆರ್ಥಿಕವಾಗಿ ತೀರಾ ಕಂಗೆಟ್ಟ ಇಳಿ ವಯಸ್ಸಿನ ಸ್ವಾಭಿಮಾನಿ ಭಟ್ಟರಿಗೆ ಸರಕಾರ, ಸಂಘ ಸಂಸ್ಥೆಗಳು ಗುರತಿಸಿ ಇವರನ್ನು ಆರ್ಥಿಕವಾಗಿ ನೆರವಾಗುವ ಪ್ರಶಸ್ತಿ, ಪುರಸ್ಕಾರ, ಆರ್ಥಿಕ ಸಹಾಯ ನೀಡಿ ಗೌರವಿಸುವ ಕಾರ್ಯ ಮಾಡಬೇಕಾಗಿದೆ.
Kshetra Samachara
16/09/2022 02:53 pm