ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ದಿನಕಳೆಯುತ್ತಿದ್ದಂತೆ ವಿದ್ಯಾರ್ಥಿಗಳ ಪೋಷಕರಲ್ಲಿ ಹೆಚ್ಚುತ್ತಿದೆ ಆತಂಕ!

ವಿಶೇಷ ವರದಿ: ರಹೀಂ ಉಜಿರೆ

ಕೆಮ್ಮಣ್ಣು: ಉಕ್ರೇನ್‌ನಲ್ಲಿ ಸಿಲುಕಿರುವ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಸ್ವದೇಶಾಗಮನದ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿದ್ದಾರೆ.ಗ್ಲೆನ್ವಿಲ್ ಫೆರ್ನಾಂಡಿಸ್ ಮತ್ತು ಅನಿಲ್ಫ್ರೆಡ್ ಅವರು ಖಾರ್ಕಿವ್ ರೈಲು ನಿಲ್ದಾಣ, ನಿಯಾಮ್ ರಾಘವೇಂದ್ರ ಅವರು ಬುಕಾರೆಸ್ಟ್‌ನಲ್ಲಿ ನೆಲೆಸಿದ್ದರೆ ರೋಹನ್ ಧನಂಜಯ್ ಬಗ್ಗಿ ಅವರು ಪೋಲಂಡ್ ತಲುಪಿದ್ದಾರೆ. ಅಂಕಿತಾ ಪೂಜಾರಿ ಅವರು ಲೈುಇವೈಗೆ ಹೋದ ಬಗ್ಗೆ ಮಾಹಿತಿ ಲಭಿಸಿದೆ.ಉದ್ಯಾವರದ ಮೃಣಾಲ್ ಈಗಾಗಲೇ ಮನೆ ತಲುಪಿದ್ದಾರೆ. ಭಾರತಕ್ಕೆ ನಿನ್ನೆ ಬಂದಿರುವ ವಿಮಾನದಲ್ಲಿ ಉಡುಪಿಯ ಯಾವುದೇ ವಿದ್ಯಾರ್ಥಿಗಳು ಇರಲಿಲ್ಲ. ವಿದ್ಯಾರ್ಥಿಗಳ ಮನೆಗೆ ಜಿಲ್ಲಾಡಳಿತದ ಅಧಿಕಾರಿಗಳು ಭೇಟಿ ನೀಡಿ ಧೈರ್ಯ ತುಂಬುತ್ತಿದ್ದಾರೆ.

ಆದರೂ ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ದಿನೇದಿನೆ ಹೆಚ್ಚುತ್ತಲೇ ಇದೆ.ಎಲ್ಲಾ ಮಕ್ಕಳನ್ನು ಕೂಡಲೇ ಏರ್‌ಲಿಫ್ಟ್ ಮೂಲಕ ತಾಯ್ನಾಡಿಗೆ ಸುರಕ್ಷಿತವಾಗಿ ಕರೆ ತರುವಂತೆ ಪೋಷಕರು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಮೆಲ್ವಿನ್ ದಂಪತಿಯ ಇಬ್ಬರು ಮಕ್ಕಳಲ್ಲಿ ಗ್ಲೆನ್ ವಿಲ್ ದೊಡ್ಡವನು. ಇನ್ನೊಬ್ಬಳು ಮಗಳು ಇಲ್ಲಿ ಒಂಭತ್ತನೆ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಫೆ.15ಕ್ಕೆ ಎಂಬಿಬಿಎಸ್ ಶಿಕ್ಷಣಕ್ಕಾಗಿ ಉಕ್ರೇನ್‌ಗೆ ಹೋಗಿರುವ ಗ್ಲೆನ್ವಿಲ್, ಮೊದಲ ದಿನ ತರಗತಿಗೆ ತೆರಳಿದ್ದಾನೆ. ಎರಡನೇ ದಿನ ಯುದ್ಧ ಆರಂಭವಾಗಿರುವುದರಿಂದ ಸದ್ಯ ಅವರೆಲ್ಲರನ್ನು ಸುರಕ್ಷಿತವಾಗಿ ಕಟ್ಟಡ ಕೆಳಗಿರುವ ಬಂಕರ್‌ನಲ್ಲಿ ಇರಿಸಲಾಗಿದೆ.

ಸದ್ಯ ಮನೆಯವರು ಮಕ್ಕಳ ದಾರಿ ಕಾಯುತ್ತಿದ್ದು ಇಂದು ಬರಬಹುದು ,ನಾಳೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

Edited By : Manjunath H D
PublicNext

PublicNext

03/03/2022 09:09 pm

Cinque Terre

54.1 K

Cinque Terre

1