ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದಾರೆ ಬ್ರಹ್ಮಾವರದ ಎಂಬಿಬಿಎಸ್ ವಿದ್ಯಾರ್ಥಿ

ವರದಿ: ರಹೀಂ ಉಜಿರೆ

ಬ್ರಹ್ಮಾವರ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರುತ್ತಿದ್ದಂತೆಯೇ ಅಲ್ಲಿ ನೆಲೆಸಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಆತಂಕ ಮೂಡಿದೆ. ಉಡುಪಿಯ ಬ್ರಹ್ಮಾವರದ ರೋಹನ್ ಬಗ್ಲಿ ಎಂಬ ವಿದ್ಯಾರ್ಥಿ ಉಕ್ರೇನ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಮನೆಯವರಲ್ಲಿ ಆತಂಕ ಮೂಡಿಸಿದೆ. ಆದರೆ ತಮ್ಮ ಪುತ್ರ ಸುರಕ್ಷಿತವಾಗಿದ್ದಾರೆ ಎಂದು ಅವರ ತಂದೆ ಮಾಹಿತಿ ನೀಡಿದ್ದಾರೆ.

ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ|ಧನಂಜಯ್ ಬಗ್ಲಿ ಅವರ ಹಿರಿಯ ಮಗ ರೋಹನ್ ಉಕ್ರೇನ್‌ನ ಕಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಐದನೇ ವರ್ಷದ ಎಂಬಿಬಿಎಸ್ ಓದುತ್ತಿದ್ದಾರೆ. ರೋಹನ್ ಅವರು ನಿನ್ನೆ ರಾತ್ರಿ ಮನೆಯವರು ಜೊತೆಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಈ ಕುರಿತು ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ನೀಡಿರುವ ತಂದೆ ಡಾ| ಧನಂಜಯ ಬಗ್ಲಿ, ಮೊನ್ನೆವರೆಗೂ ಪರಿಸ್ಥಿತಿ ಶಾಂತವಾಗಿತ್ತು ಅಂತ ಮಗ ತಿಳಿಸಿದ್ದಾನೆ. ಆದರೆ ನಿನ್ನೆ ಮಧ್ಯರಾತ್ರಿಯಿಂದ ಯುದ್ಧ ಆರಂಭವಾದ ಬಗ್ಗೆ ತಿಳಿಸಿದ್ದ. ಇವತ್ತು ಅವನ ಜೊತೆಗೆ ಇದ್ದವರನ್ನು ಸೇಫ್ ಬಂಕರ್ಸ್ ಗೆ ಸ್ಥಳಾಂತರ ಮಾಡಿದ್ದಾರೆ. ಸದ್ಯಕ್ಕೆ ಅವರಿಗೆಲ್ಲ ಯಾವುದೇ ತೊಂದರೆ ಇಲ್ಲ. ಈಗ ವಿಮಾನ ಹಾರಾಟ ಮಾಡುತ್ತಿಲ್ಲ.ಹೀಗಾಗಿ ಆ ದೇಶದ ಜೊತೆಗೆ ಸಂಪರ್ಕ ಮಾಡಿ ಸರ್ಕಾರ ಎಲ್ಲರನ್ನೂ ಏರ್ ಲಿಫ್ಟ್ ಮಾಡಿದ್ರೆ ನಮ್ಮ ಆತಂಕ ದೂರವಾಗುತ್ತದೆ ಎಂದು ಹೇಳಿದ್ದಾರೆ.

ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್‌ನಲ್ಲಿ ಉಡುಪಿ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರು ಸಿಲುಕಿಕೊಂಡಲ್ಲಿ ಅವರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ನೆರವು ಅಗತ್ಯವಿದ್ದರೆ ಆ ಕುರಿತಂತೆ ಅಗತ್ಯ ಮಾಹಿತಿ ನೀಡಲು ಉಭಯ ಜಿಲ್ಲಾಡಳಿತಗಳು ಕೋರಿವೆ.

ಜಿಲ್ಲೆಯ ಜಿಲ್ಲಾಧಿಕಾರಿಯವರ ಕಚೇರಿಯ ಕಂಟ್ರೋಲ್ ರೂಂನ ನಂಬರ್- 1077ಗೆ ಕರೆ ಮಾಡಬಹುದು ಅಥವಾ ಹತ್ತಿರದ ತಹಶೀಲ್ದಾರರ ಕಚೇರಿ ಅಥವಾ ಜಿಲ್ಲಾಧಿಕಾರಿಯವರ ಕಚೇರಿಗೆ ಮಾಹಿತಿ ನೀಡುವಂತೆ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

Edited By : Shivu K
Kshetra Samachara

Kshetra Samachara

25/02/2022 08:31 am

Cinque Terre

12.82 K

Cinque Terre

1