ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಜಾಗತಿಕ ಬಂಟರ ಸಂಘದಿಂದ ಸುಮಾರು 4 ಕೋಟಿ ರೂ. ಸಹಾಯ ಹಸ್ತ; ಐಕಳ ಹರೀಶ್ ಶೆಟ್ಟಿ

ಮುಲ್ಕಿ: ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಪಡುಬೈಲು ಬಳಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ದಾನಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಕಟ್ಟಡ ಸಂಕೀರ್ಣದ ಪ್ರಥಮ ಹಂತದ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ಕಾರ್ನಾಡ್ ಪಡುಬೈಲು ಬಳಿ ಅರ್ಚಕ ಗೋಪಾಲಕೃಷ್ಣ ಬಪ್ಪನಾಡು ರವರ ಪೌರೋಹಿತ್ಯದಲ್ಲಿ , ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ನೇತೃತ್ವದಲ್ಲಿ ನಡೆಯಿತು.

ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಐಕಳ ಹರೀಶ್ ಶೆಟ್ಟಿ ಮಾತನಾಡಿ ಜಾಗತಿಕ ಬಂಟರ ಸಂಘದ ಒಕ್ಕೂಟದಿಂದ ಈಗಾಗಲೇ ಸುಮಾರು 4 ಕೋಟಿ ವೆಚ್ಚದಲ್ಲಿ ವಿವಿಧ ಸಮಾಜದ ದುರ್ಬಲ ವರ್ಗದವರಿಗೆ, ಅಸಹಾಯಕರಿಗೆ ಸಹಾಯ ಹಸ್ತ ನೀಡಲಾಗಿದೆ.

ಮುಂಬೈಯಲ್ಲಿ ಕೇಂದ್ರ ಸ್ಥಾನ ಹೊಂದಿರುವ ನಮ್ಮ ಒಕ್ಕೂಟವು ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಚೇರಿಯನ್ನು ಹೊಂದುವ ಉದ್ದೇಶವಿಟ್ಟು ಈ ನಿಟ್ಟಿನಲ್ಲಿ ಮುಲ್ಕಿ ಕೇಂದ್ರ ಭಾಗದಲ್ಲಿ ಕಚೇರಿ ಹಾಗೂ ಸಂಕೀರ್ಣ ಹೊಂದುವ ಕಾರ್ಯ ಯೋಜನೆ ಇದಾಗಿದೆ. ಯೋಜನೆಗೆ ಅಂದಾಜು 25 ಕೋಟಿ ವೆಚ್ಚ ನಿರೀಕ್ಷಿಸಲಾಗಿದ್ದು ಮುಂದಿನ ದಿನಗಳಲ್ಲಿ ಸಹಾಯ ಹಸ್ತ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದರು.

ಉಪಾಧ್ಯಕ್ಷ ಕರ್ನೀರೆ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಐಕಳ ಬಾವ ದೇವಿ ಪ್ರಸಾದ್ ಶೆಟ್ಟಿ , ಮುಲ್ಕಿ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಪುರುಷೋತ್ತಮಶೆಟ್ಟಿ ಸಾಯಿನಾಥ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

07/10/2022 08:53 pm

Cinque Terre

2.93 K

Cinque Terre

0

ಸಂಬಂಧಿತ ಸುದ್ದಿ