ಕಾರ್ಕಳ: ಯಾಮಾರಿದ್ರೆ ಯಮಪುರಿಗೆ ಟಿಕೆಟ್ ಶೀರ್ಷಿಕೆಯಡಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದಲ್ಲಿ ಪ್ರಸಾರಗೊಂಡ ಜನಪರ ವರದಿಗೆ ಸಂಬಂಧಪಟ್ಟಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ ಕಾರ್ಕಳ ಹೆಬ್ರಿ ರಾಜ್ಯ ಹೆದ್ದಾರಿಯಲ್ಲಿನ ಮರಣಗುಂಡಿಯನ್ನು ದುರಸ್ತಿಗೊಳಿಸಿದ್ದಾರೆ ಇದು ಪಬ್ಲಿಕ್ ನೆಕ್ಸ್ಟ್ ವರದಿಯ ಇಂಪ್ಯಾಕ್ಟ್ ಆಗಿದೆ
ರಾಜ್ಯ ಹೆದ್ದಾರಿ ರಲ್ಲಿನ ಹಿರ್ಗಾನ ಗ್ರಾಮದ ಚಿಕ್ಕಲ್ ಬೆಟ್ಟು ಕ್ರಾಸ್ ಬಳಿ ಒಂದು ಪಾರ್ಶ್ವದ ರಸ್ತೆಗೆ ಹಾಕಿದ್ದ ಕಾಂಕ್ರೀಟ್ ಸ್ಲಾಬ್ ಕುಸಿದು ಬೃಹತ್ ಕಂದಕ ನಿರ್ಮಾಣವಾಗಿತ್ತು. ಆದರೆ ದುರಸ್ತಿ ಮಾಡಬೇಕಾಗಿದ್ದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದರ ಪರಿಣಾಮ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ವಾಹನ ಚಾಲಕರಿಗೆ ಆಗುತ್ತಿದ್ದ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಪಬ್ಲಿಕ್ ನೆಕ್ಸ್ಟ್ ವಾಹಿನಿಯು ಈ ಸಮಸ್ಯೆಯ ಸಮಗ್ರ ವರದಿಯನ್ನು ವಿಡಿಯೋ ಸಹಿತ ಪ್ರಕಟಿಸಿತು ಈ ವರದಿ ಪ್ರಕಟಗೊಂಡ ಬೆನ್ನಲ್ಲೇ ಎಚ್ಚೆತ್ತು ಅಧಿಕಾರಿಗಳು ಕೇವಲ ಎರಡೇ ದಿನಗಳಲ್ಲಿ ಕುಸಿದ ಕಾಂಕ್ರೀಟ್ ಸ್ಲಾಬನ್ನು ಮರುದುರಸ್ತಿಗೊಳಿಸಿದ್ದಾರೆ. ಪಬ್ಲಿಕ್ ನೆಕ್ಸ್ಟ್ ನ ಜನಪರ ಕಾಳಜಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
Kshetra Samachara
21/09/2022 09:05 pm