ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66 ರ ಹಳೆಯಂಗಡಿ ಜಂಕ್ಷನ್ ಅವ್ಯವಸ್ಥೆಗಳ ಆಗರವಾಗಿದ್ದು, ವಾಹನ ಸವಾರರಿಗೆ ಮುಗಿಯದ ಗೋಳಾಗಿ ಪರಿಣಮಿಸಿದೆ.
ಸೂಕ್ತ ಸರ್ವಿಸ್ ರಸ್ತೆ ಸಹಿತ ಮೂಲಭೂತ ಸೌಕರ್ಯಗಳ ಕೊರತೆಯಿಂದ ಹಳೆಯಂಗಡಿ ಜಂಕ್ಷನ್ ಅಪಘಾತ ವಲಯ ಪ್ರದೇಶವಾಗಿ ಪರಿಣಮಿಸಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಹೆದ್ದಾರಿ ಬಗ್ಗೆ ಕೆರೆಯಂತಾಗಿದ್ದು ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದೆ.
ಹೆದ್ದಾರಿಯಲ್ಲಿ ಅತೀ ವೇಗದಿಂದ ಸಾಗುವ ವಾಹನಗಳಿಗೆ ಕಡಿವಾಣ ಹಾಕಲು ಬ್ಯಾರಿಕೇಡ್ ಅಳವಡಿಸಿದ್ದರೂ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ಕೊರತೆಯಿಂದ ಸಣ್ಣಪುಟ್ಟ ವಾಹನ ಸವಾರರಿಗೆ ಕಂಟಕ ಪ್ರಾಯವಾಗಿ ಪರಿಣಮಿಸಿದೆ. ಹಳೆಯಂಗಡಿ ಜಂಕ್ಷನ್ ಪ್ರದೇಶ ಒಂದೆಡೆ ಕಿನ್ನಿಗೋಳಿ, ಕಟೀಲು, ಮೂಡಬಿದ್ರೆ ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿ ಉಡುಪಿ, ಮಂಗಳೂರು ಸಂಪರ್ಕಿಸುವ ಪ್ರಮುಖ ತಾಣವಾಗಿದೆ, ಇದನ್ನ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅನೇಕ ಬಾರಿ ಹೆದ್ದಾರಿ ಇಲಾಖೆಗೆ, ಶಾಸಕರಿಗೆ, ಸಂಸದರಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಸಂಬಂಧಪಟ್ಟವರು ಮೌನವಾಗಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದ್ದು ಪ್ರತಿಭಟನೆಯೇ ಮುಂದಿನ ಅಸ್ತ್ರ ಎಂಬ ಮಾತುಗಳು ಕೇಳಿ ಬಂದಿದೆ.
Kshetra Samachara
14/09/2022 01:56 pm