ಹೆಬ್ರಿ: ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವದ ಅಂಗವಾಗಿ ಹೆಬ್ರಿಯ ನಕ್ಸಲ್ ನಿಗ್ರಹ ಪಡೆ ಇನ್ಸ್ಪೆಕ್ಟರ್ ಸತೀಶ್ ಬಿಎಸ್ ಅವರ ನೇತೃತ್ವದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ನಡೆಯಿತು.
ಹೆಬ್ರಿಯ ಕಾಸನಕಟ್ಟೆಯಿಂದ ಸೀತಾನದಿ ಕೈಕಂಬ ವಾಜಪೇಯಿ ವೃತ್ತದವರೆಗೆ ಸುಮಾರು ನಾಲ್ಕು ಕಿಲೋಮೀಟರ್ ರಸ್ತೆಯ ಇಕ್ಕೆಲಗಳ ಕಸ ಸಂಗ್ರಹಿಸಿ ಸ್ವಚ್ಛತಾ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕೆ ಅಡ್ಯಂತಾಯ, ಪಂಚಾಯತ್ ಸದಸ್ಯ ತಾರನಾಥ್ ಬಂಗೇರಾ, ಆರ್ ಎಫ್ ಓ ಅನಿಲ್ ಕುಮಾರ್, ಪಿಎಸ್ಐ ವೀರೇಶ್, ಆರ್ ಎಸ್ ಐ ವಸಂತ್, ಸುಧಾಕರ್ ಹೆಗ್ಡೆ ಹಾಗೂ ನಕ್ಸಲ್ ನಿಗ್ರಹ ಪಡೆ ಸಿಬ್ಬಂದಿಗಳು ಸೇರಿದ್ದರು.
Kshetra Samachara
11/08/2022 02:10 pm