ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವರಕೊಲ್ಲಿ ಬಳಿ ಬಿರುಕು ಬಿಟ್ಟ ರಾಷ್ಟ್ರೀಯ ಹೆದ್ದಾರಿ

ಸುಳ್ಯ: ದೇವರ ಕೊಲ್ಲಿ ಸಮೀಪದ ಕೊಕ್ಕೊ ಕಂಪನಿಯ ಗಾರುಮುರಿ ಎಂಬಲ್ಲಿ ಮಂಗಳೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಬಿರುಕು ಬಿಟ್ಟಿರುವ ಬಗ್ಗೆ ಇದೀಗ ವರದಿಯಾಗಿದೆ. ಕಳೆದ ಕೆಲವು ದಿನಗಳಿಂದ ಸಣ್ಣ ಪ್ರಮಾಣದಲ್ಲಿ ಇದ್ದ ಬಿರುಕು ಇಂದು ಬೆಳಗ್ಗೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ ಎನ್ನಲಾಗುತ್ತಿದೆ.

ಈಗಾಗಲೇ ಕೊಡಗಿನಲ್ಲಿ ಗುಡ್ಡ, ಬರೆ ಜರಿದು ಮಡಿಕೇರಿ -ಮಂಗಳೂರು ರಸ್ತೆಯ ಪ್ರಯಾಣಿಕರಿಗೆ ಭಾರಿ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿಯೇ ಕೊಡಗು ಜಿಲ್ಲಾಧಿಕಾರಿಗಳು ಅಗತ್ಯ ವಸ್ತುಗಳ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲ ಘನ ವಾಹನಗಳನ್ನು ಅಕ್ಟೋಬರ್ ಮೊದಲ ವಾರದ ತನಕ ಈ ರಸ್ತೆಯಲ್ಲಿ ನಿರ್ಬಂಧ ಹೇರಿದ್ದಾರೆ, ಹೀಗಾಗಿ ಈ ಪ್ರದೇಶದಲ್ಲಿ ಈಗ ಭಾರಿ ಗಾತ್ರದ ಲಾರಿಗಳ ಓಡಾಟ ಕಡಿಮೆ ಆಗಿದೆ. ಹೀಗಿದ್ದರೂ ರಸ್ತೆ ಬಿರುಕು ಬಿಟ್ಟಿರುವುದರಿಂದ ಸಹಜವಾಗಿಯೇ ವಾಹನ ಸವಾರರಿಗೆ ಆತಂಕ ಹೆಚ್ಚಿಸಿದೆ.

Edited By : Nirmala Aralikatti
Kshetra Samachara

Kshetra Samachara

13/07/2022 08:47 pm

Cinque Terre

3.06 K

Cinque Terre

0

ಸಂಬಂಧಿತ ಸುದ್ದಿ