ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂದುವರಿದ ವರುಣಾರ್ಭಟ : ಮನೆಯಂಗಳದ ಬಾವಿ ಕುಸಿತ ತಪ್ಪಿತು ದುರಂತ

ಉಳ್ಳಾಲ : ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಅಂಗಳದ ಬಾವಿ ಕುಸಿದ ಘಟನೆ ಮಂಗಳವಾರ ರಾತ್ರಿ ಮೂರುಕಟ್ಟೆ ಎಂಬಲ್ಲಿ ನಡೆದಿದೆ.

ಹೌದು ಮೂರುಕಟ್ಟೆ ನಿವಾಸಿ ಸಂದೀಪ್ ಪೂಜಾರಿಯವರ ಮನೆಯಂಗಳದ ಬಾವಿಯೇ ಕುಸಿತಗೊಂಡಿದ್ದು ಭಾರೀ ದುರಂತವೊಂದು ತಪ್ಪಿದೆ. ಘಟನೆ ಕುಂಪಲ ಮೂರುಕಟ್ಟೆ ಎರಡನೇ ಅಡ್ಡ ರಸ್ತೆಯಲ್ಲಿ ನಡೆದಿದೆ.

ಸಂದೀಪ್ ಮತ್ತು ಅವರ ಇಬ್ಬರು ಸಹೋದರರು ಪತ್ನಿ ಮಕ್ಕಳೊಂದಿಗೆ ಈ ಮನೆಯಲ್ಲಿ ಜೊತೆಯಾಗಿ ವಾಸಿಸುತ್ತಿದ್ದಾರೆ.ಸಂದೀಪ್ ಅವರ ಸಹೋದರ ಅವಿನಾಶ್ ಅವರ ಪತ್ನಿ ದಿನನಿತ್ಯವೂ ಬೆಳ್ಳಂ ಬೆಳಗ್ಗೆ ಕುಡಿಯಲು ಬಾವಿಯ ನೀರನ್ನು ಸೇದುತ್ತಿದ್ದರು. ಅಲ್ಲದೇ ಹಗಲಲ್ಲಿ ಮೂವರು ಸಹೋದರರ ಮಕ್ಕಳು ಅಂಗಳದಲ್ಲಿ ಆಟವಾಡುತ್ತಿರುತ್ತಾರೆ.ಅದೃಷ್ಟವಶಾತ್ ಘಟನೆ ರಾತ್ರಿ ನಡೆದುದರಿಂದ ಭಾರೀ ಸಂಭವನೀಯ ದುರುಂತವೊಂದು ತಪ್ಪಿದಂತಾಗಿದೆ.

ಇನ್ನು ಘಟನೆಯಿಂದ ಸುಮಾರು ಮೂರು ಲಕ್ಷ ರೂ. ನಷ್ಟ ಸಂಭವಿಸಿದೆ.ಸ್ಥಳಕ್ಕೆ ಭೇಟಿ ಕೊಟ್ಟ ಸೋಮೇಶ್ವರ ಪುರಸಭಾ ನಿಕಟಪೂರ್ವ ಸದಸ್ಯ ಮನು ಕಟ್ಟೆಮನೆ ಅವರು ನಷ್ಟದ ಪರಿಹಾರ ಒದಗಿಸಿ ಕೊಡುವುದಾಗಿ ಹೇಳಿದ್ದಾರೆ.

ನಿರಂತರ ಮಳೆ ಸುರಿಯುವಾಗ ಬಾವಿಯ ನೀರು ಸೇದಬೇಡಿ ಎಂದು ಜನರಿಗೆ ಎಚ್ಚರಿಸಿದ್ದಾರೆ.

Edited By :
Kshetra Samachara

Kshetra Samachara

06/07/2022 01:07 pm

Cinque Terre

8.05 K

Cinque Terre

0

ಸಂಬಂಧಿತ ಸುದ್ದಿ