ಬಂಟ್ವಾಳ: ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಪೇರಮೊಗರುವಿನಿಂದ ಮುರದ ವರೆಗಿನ ರಸ್ತೆಯಲ್ಲಿ ಸಿಗುವ ಬಡೆಕ್ಕಿಲ ಸಮೀಪ ಪೂರ್ಲಡ್ಕ ಎಂಬ ಕಿರುಸೇತುವೆಯಲ್ಲಿಂದು ದೊಡ್ಡ ಲಾರಿಯೊಂದು ರಸ್ತೆಯ ಉದ್ದಗಲವನ್ನು ಅರಿಯದೆ ಅಲ್ಲಿ ಬಂದು ಅತ್ತ ಹೋಗಲು ಆಗದೆ, ಇದ್ದ ಹಿಂದೆ ಬರಲೂ ಆಗದೆ ಪೇಚಿಗೆ ಸಿಲುಕುವಂತಾಯಿತು. ಬಳಿಕ ಕ್ರೇನ್ ಸಹಾಯದಿಂದ ಲಾರಿಯನ್ನು ಹೊರ ತರಲಾಯಿತು.
ಈ ರಸ್ತೆಯ ದುಸ್ಥಿತಿ ಇಂದಿನದಲ್ಲ ಇಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇದು ಅನಿವಾರ್ಯ ಆಗಿದೆ. ಹೆದ್ದಾರಿಯಲ್ಲಿ ಏನಾದರೂ ಅನಾಹುತ ಆದರೆ ಈ ರಸ್ತೆಗೆ ಪ್ರಾಮುಖ್ಯತೆ ದೊರಕುತ್ತದೆ. ಉಪ್ಪಿನಂಗಡಿ ಕಡೆಯಿಂದ ಪುತ್ತೂರಿಗೆ ಹೋಗಬೇಕಾದರೆ, ಮಾಣಿಗೆ ಬಾರದೆ ನೇರವಾಗಿ ಈ ರಸ್ತೆಯನ್ನು ಕ್ರಮಿಸಬಹುದು. ಮಾಣಿಯಿಂದ ಪುತ್ತೂರು ಮೈಸೂರು ಕಡೆಗಳಿಗೆ ಹೋಗುವ ಹೆದ್ದಾರಿಯಲ್ಲಿ ಪುತ್ತೂರು ತಲುಪುವ ಮೊದಲು ಸಿಗುವ ಮುರ ಎಂಬ ಸ್ಥಳವನ್ನು ಈ ರಸ್ತೆ ಕೂಡುತ್ತದೆ. ಉಪ್ಪಿನಂಗಡಿಯಿಂದ ಮಾಣಿ ಕಡೆಗೆ ಬರುವ ಮಂಗಳೂರು ಬೆಂಗಳೂರು ಹೆದ್ದಾರಿಯಲ್ಲಿ ಪೇರಮೊಗರು ಎಂಬ ಪ್ರದೇಶದಿಂದ ಮುರ ಸಂಪರ್ಕಿಸುವ ಈ ರಸ್ತೆ, ಎರಡೂ ಹೆದ್ದಾರಿಗಳಲ್ಲಿ ಅಪಘಾತವೇನಾದರೂ ಆದರೆ ಸಂಪರ್ಕ ರಸ್ತೆಯಾಗಿ ಕೆಲಸ ಮಾಡುತ್ತದೆ. ವಾಹನಗಳು ಜಾಸ್ತಿಯಾಗಿಯೇ ಸಂಚರಿಸುವ ಈ ಭಾಗದಲ್ಲಿ ಅಗಲಕಿರಿದಾದ ಸೇತುವೆಯೇ ಸಮಸ್ಯೆ ಉಂಟಾಗುತ್ತಿದೆ.
Kshetra Samachara
25/05/2022 05:53 pm