ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕೃಷ್ಣನಗರಿಯಲ್ಲಿ ರಾಜ್ಯಮಟ್ಟದ ಸೌಹಾರ್ದ ಸಮಾವೇಶ: ಸಾಮರಸ್ಯ ನಡಿಗೆ

ಉಡುಪಿ: ರಾಜ್ಯದಲ್ಲಿ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿರುವ ಉಡುಪಿಯಲ್ಲಿ ಇವತ್ತು ಸೌಹಾರ್ದ ಸಮಾವೇಶ ಮತ್ತು ಸಾಮರಸ್ಯ ನಡಿಗೆ ನಡೆಯುತ್ತಿದೆ. ರಾಜ್ಯಮಟ್ಟದ ಸಹಬಾಳ್ವೆ ಸಮಾವೇಶಕ್ಕೂ ಮುನ್ನ ಉಡುಪಿಯ ಹುತಾತ್ಮ ಸೈನಿಕ ಸ್ಮಾರಕದ ಎದುರು ಸಾಮರಸ್ಯ ನಡಿಗೆಗೆ ಚಾಲನೆ ನೀಡಲಾಯಿತು.ವಿವಿಧ ಸಂಘಟನೆಗಳು ನಡಿಗೆಗೆ ಚಾಲನೆ ನೀಡಿದ ಬಳಿಕ ಸಾವಿರಾರು ಜನ ಸಾಮರಸ್ಯ ನಡಿಗೆಯಲ್ಲಿ ಪಾಲ್ಗೊಂಡರು.ರಾಜ್ಯದ ಪ್ರಗತಿಪರ, ಎಡಪಂಥೀಯ ಸಂಘಟನೆಗಳು ಇದರ ನೇತೃತ್ವ ವಹಿಸಿವೆ.

ರಾಜ್ಯದ ಎಲ್ಲಾ ಮತ-ಪಂಥ ಧರ್ಮ-ಜಾತಿಯ ಪ್ರಮುಖರು ಭಾಗಿಯಾಗಿದ್ದು ಉಡುಪಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಮೆರವಣಿಗೆ ಬಳಿಕ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಸಮಾವೇಶಕ್ಕೆ ಸಿದ್ಧತೆ ನಡೆದಿದೆ. ಹಿಂದೂ ಮುಸಲ್ಮಾನ ಕ್ರೈಸ್ತ ಬೌದ್ಧ ಧರ್ಮದ ಮುಖಂಡರು ಭಾಗಿಯಾಗಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ, ಟ್ಯಾಬ್ಲೋ ಮೂಲಕ ಸೌಹಾರ್ದದ ಸಂದೇಶ ರವಾನಿಸಲಾಗುತ್ತಿದೆ.

ಸಾವಿರಾರು ಜನ ಸಮಾನಮನಸ್ಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.ಸಂಜೆ ನಡೆಯುವ ಸಮಾವೇಶದಲ್ಲಿ ಸರ್ವಧರ್ಮದ ಧರ್ಮಗುರುಗಳು ಸೌಹಾರ್ದ ಸಂದೇಶ ನೀಡಲಿದ್ದಾರೆ.

Edited By :
PublicNext

PublicNext

14/05/2022 06:53 pm

Cinque Terre

61.42 K

Cinque Terre

6

ಸಂಬಂಧಿತ ಸುದ್ದಿ