ವರದಿ: ಭರತ್ ಶೆಟ್ಟಿ
'ಪಬ್ಲಿಕ್ ನೆಕ್ಸ್ಟ್' ವರದಿ ಫಲಶ್ರುತಿ
ಕೋಟ: ಉಡುಪಿ ಜಿಲ್ಲೆಯ ಸಾಲಿಗ್ರಾಮ ಸರ್ವಿಸ್ ರಸ್ತೆ ಕಾಮಗಾರಿಯು ಯೋಜನೆಯ ಸ್ವರೂಪದಂತೆ ಮೀನು ಮಾರುಕಟ್ಟೆಯಿಂದ ಬಸ್ ನಿಲ್ದಾಣದವರೆಗೆ ಎರಡು ಕಡೆ ಸರ್ವಿಸ್ ರಸ್ತೆ ಹಾಗೂ ಚರಂಡಿ ನಿರ್ಮಾಣವಾಗಬೇಕಿತ್ತು. ಆದರೆ, ಯಾವುದೇ ಕಾರಣ ನೀಡದೆ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ್ದು, ಇಲ್ಲಿನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಬಗ್ಗೆ 'ಪಬ್ಲಿಕ್ ನೆಕ್ಸ್ಟ್' ತಂಡ ಒಂದು ತಿಂಗಳ ಹಿಂದೆಯಷ್ಟೇ ವರದಿ ಮಾಡಿದ್ದರ ಪರಿಣಾಮ ಎಚ್ಚೆತ್ತ ಅಧಿಕಾರಿಗಳು ಇದೀಗ ರಸ್ತೆ ಕಾಮಗಾರಿ ಮತ್ತೆ ಪ್ರಾರಂಭಿಸಿದ್ದಾರೆ.
Kshetra Samachara
22/04/2022 10:08 pm